ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಾರ ಭವಿಷ್ಯವನ್ನ ಯಾರು ನಿರ್ಧರಿಸುತ್ತಾರೆ?


 ಯಾರ ಭವಿಷ್ಯವನ್ನ ಯಾರು ನಿರ್ಧರಿಸುತ್ತಾರೆ?

Who decides whose fate?

ಅಮಿತಾಬ್ ಬಚ್ಚನ್ ಅವರ ಸಿನಿಮಾ ಬದುಕಿಗೆ ಚರಮ ಗೀತೆಯನ್ನು ಬರೆಯಲೆತ್ನಿಸಿದ ಪತ್ರಿಕಾ ಮಂದಿ ಒಂದಿಬ್ಬರಲ್ಲ.

ವ್ಯಕ್ತಿಯೊಬ್ಬರ ಜನಪ್ರಿಯತೆ ಹೆಚ್ಚುತ್ತಿದ್ದಂತೆ ಆತನಿಗೆ / ಆಕೆಗೆ ಅಹಂನ ಪಟ್ಟಿ ಕಟ್ಟಿ, ಆತ ಹಳ್ಳಕ್ಕೆ ಬಿದ್ದಾಗ, ಹಳ್ಳಕ್ಕೆ ಬಿದ್ದ ಕತ್ತೆಯ ಮೇಲೆ ಕಸ ಎಸೆದು ಹೂಳಿಬಿಡಲು ನೋಡುವ ಕತೆಯಲ್ಲಿನ ಜನರಂತೆಯೇ ಅವರ ಮೇಲೆ ಕಸ ಹಾಕಲು ಪ್ರಯತ್ನಿಸುತ್ತಾರೆ.  ಮಾನವ ಸಹಜವಾಗಿ,  ಜನಪ್ರಿಯನಾಗಿದ್ದ ವ್ಯಕ್ತಿ ಸೋಲಿಗೆ ಸಿಲುಕಿದಾಗ ಕ್ರೋಧ ಮೂಡುತ್ತದೆ.  ಆಗ ಸುತ್ತಲಿನ ಜನರ ಆರ್ಭಟ ಮತ್ತಷ್ಟು ಹೆಚ್ಚಾಗುತ್ತದೆ.

1988ರಲ್ಲಿ ಅಮಿತಾಬ್ ಬಚ್ಚನ್ ಅವರ 'ಗಂಗಾ ಜಮುನಾ ಸರಸ್ವತಿ' ಎಂಬ ಚಿತ್ರ ಸೋತಿತು.  ಆಗ ಚಿತ್ರದಲ್ಲಿರುವ ಪತ್ರಿಕೆ ಅಮಿತಾಬರಿಗೆ 'Finished!’ ಎಂದು ಬರೆಯಿತು.  ಆ ಪತ್ರಿಕೆಯ ಈ  ಸಂಚಿಕೆ ಮೂಡಿ 36 ವರ್ಷವಾಯಿತು.  ಇಂದಿಗೂ ಅಮಿತಾಬ್ ಅವರ ಜನಪ್ರಿಯತೆ ಎತ್ತರದಲ್ಲಿದೆ.  ಆದರೆ ಅದನ್ನು ಬರೆದಿದ್ದ ಆ ಪತ್ರಿಕೆ, ಆ ನಂತರ ಉಳಿದಿದ್ದ ಕಾಲವೆಷ್ಟು!

ಡಿವಿಜಿ ಅವರ ಈ ಕಗ್ಗ ನೆನಪಾಯಿತು....

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ? | ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ || ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ | ಸಹನೆ ವಜ್ರದ ಕವಚ – ಮಂಕುತಿಮ್ಮ || ಕಗ್ಗ ೪೮೦ ||

ಜೋಯಿಸ ಗ್ರಹಗತಿಯ ತಿದ್ದಲು ಸಾಧ್ಯವೆ?  

ಸಹನೆ ಅಮಿತಾಬರನ್ನು ಗೆಲ್ಲಿಸಿದೆ. ಅದರೆ ಎಷ್ಟೋ ಜನ ಸಹನೆ ಇಲ್ಲದೆ ಕಷ್ಟಕ್ಕೆ ಗುರಿಯಾಗಿದ್ದಾರೆ.  ಮಾಧ್ಯಮ ಹಾಗೂ ತಾವೇ ಮಾಧ್ಯಮ ಎಂದು ಭ್ರಮಿಸುವ ಸೋಷಿಯಲ್ ಮೀಡಿಯಾದ ಜನ, ಅವರನ್ನು ಘಾಸಿಗೊಳಿಸಿ, ಅವರ ಮತ್ತು ಸಮಾಜದ ಅಧಃಪತನಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.

ಹಾಗೆಂದ ಮಾತ್ರಕ್ಕೆ ಪತ್ರಿಕೆ ಆಗಲಿ ಮತ್ತೊಬ್ಬರಾಗಲಿ ಯಾರಿಗೋ ಮಣೆ ಹಾಕಿ ಬದುಕಬೇಕು ಎಂದರ್ಥವಲ್ಲ.  ವಿಮರ್ಶೆ ಸಮಾಜಮುಖಿಯಾಗಿ ವಸ್ತುನಿಷ್ಟವಾಗಿರಬೇಕು.

ನಮ್ಮ ಭವಿತವ್ಯ ಗೊತ್ತಿಲ್ಲದೆ, ಲೋಕ ಭವಿಷ್ಯವನ್ನು ನಿರ್ಧರಿಸುವ ಕ್ಷುಲ್ಲಕತನ ನಮಗ್ಯಾರಿಗೂ ಸಲ್ಲದು!

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ