ಪದ್ಮನಾಭ ಅಡಿಗ
ಪದ್ಮನಾಭ ಅಡಿಗ ನಮನ
ಬೆಂಗಳೂರಿನ ವಿಶ್ವೇಶ್ವರ ಪುರದ NMH ಹೋಟೆಲ್ ಬೆಂಗಳೂರಿನ ಹಳೆಯ ಆಪ್ತಹೆಸರುಗಳಲ್ಲೊಂದು. ಪದ್ಮನಾಭ ಅಡಿಗರು ಈ ನ್ಯೂ ಮಾಡ್ರನ್ ಹೋಟೆಲಿನ ಮಾಲೀಕರಾಗಿದ್ದವರು.
ಹೋಟೆಲ್ ಉದ್ಯಮದವರಿಗೆ ಪದ್ಮನಾಭ ಅಡಿಗರು ಹಿರಿಯ ಉದ್ಯಮಿಮಾರ್ಗದರ್ಶಿಯಂತಿದ್ದವರು. ಇತರ ಊರಿನಿಂದ ಬಂದ ಕಲಾವಿದರಿಗೆ ಇವರ ಹೋಟೆಲಿನ ವಸತಿಮತ್ತು ಉಪಚಾರಗಳು ಸದಾ ಆತ್ಮೀಯ. ಈ ಹೋಟೆಲಿಗೆ ಯಾರೇ ಬಂದರೂ ಅವರಿಗೆ ಬಯಸಿದತಿಂಡಿ ಅಚ್ಚುಕಟ್ಟಾಗಿ ಸಿಗುತ್ತಿತ್ತು ಎಂಬುದರ ಜೊತೆಗೆ ಪದ್ಮನಾಭ ಅಡಿಗರ ನಗೆ ತುಂಬಿದ ಆತ್ಮೀಯಭಾವವೂ ಆಪ್ತವಾಗಿರುತ್ತಿತ್ತು.
ಪದ್ಮನಾಭ ಅಡಿಗರು 2022ರ ಆಗಸ್ಟ್ 14ರಂದು ತಮ್ಮ 82ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. ಎಲ್ಲವೂ ವ್ಯಾಪಾರವೆನಿಸುವ ಈ ಜಗತ್ತಿನಲ್ಲಿ ವ್ಯಾಪಾರ - ವ್ಯವಹಾರವನ್ನು ಆತ್ಮೀಯ ನೆಲೆಯಲ್ಲಿಬದುಕಿನ ಭಾಗವಾಗಿಸಿಕೊಂಡಿದ್ದ ಪದ್ಮನಾಭ ಅಡಿಗರಂತಹವರ ಬದುಕು ಸದಾ ಸ್ಮರಣೀಯ.
Respects to departed soul great hotelier and patron for arts Padmanabha Adiga
ಕಾಮೆಂಟ್‌ಗಳು