ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಯೆ ಶ್ರೀ ಹರಿ ಜಾಯೆ


 

ಕಾಯೆ ಶ್ರೀ ಹರಿ ಜಾಯೆ ಸಜ್ಜನ ಪ್ರೀಯೆ 
ಸುರಮುನಿ ಗೇಯೆ - (ಪ) 

ತಾಯೇ ಎನ್ನಯ ಕಾಯ ನಿನ್ನದು ಕಾಯೇ ಕರುಣಾಬ್ಧಿಯೇ - (ಅ.ಪ)

ಪದ್ಮ ಮಂದಿರೆ ಪದ್ಮ ಗಂಧಿನಿ 
ಪದ್ಮಕುಚ ರಾಣಿ ಪದ್ಮಶರ ಮಾತೇ 
ಪದ್ಮ ಬಾಂಧವೆ ಪದ್ಮರಿಪು ತಾಯೆ ॥ 
ಪದ್ಮಿ ಪದ್ಮಾ ಪದ್ಮಾಭಿನ್ನ ಪದ್ಮಪಾದ ಹೃ-
ತ್ರದ್ಮದೊಳಗಿಟ್ಟ ಮುದ್ದು ಮಹಾ ಲಕುಮೀ - (1)

ಮೂಕ ದಾನವನ ಕೊಂದು ಅವನ 
ಕೊಂಕು ಮನ್ನಿಸಿದ ಮೂಕಾಂಬಿಕೆಯೇ 
ಶ್ರೀಕಲಾ ಪಾಲಸಾಗರವಾಗಿ ಸಾಕಿದೆ ಋಷಿಯಾ 
ವಾಕೇಶ ಶಿವ ಪಾಕಶಾಸನ-
ನೇಕ ಜನ ಪುಷ್ಪ ವೃಷ್ಟಿಗರೆಯಾಲು 
ಈ ಕೊಲ್ಲೂರೊಳು ನೀ ಕರುಣದಿ ನಿಂದೀ 

ನಿನ್ನ ಪಾದಾಬ್ಜವನ್ನು ಅನುದಿನ ಸನ್ನುತಿಸುವೆ ಚೆನ್ನ ವಿಜಯ ರಾ-
ಯನ್ನ ಮನೆ ಮುಂದೆ ಕುನ್ನಿಯನ್ನೇ 
ಮಾಡಿ ಎನ್ನ ಪುಟ್ಟಿಪುದು 
ಪನ್ನಗವೇಣಿ ಘನ್ನ ದುರಿತಾಬ್ಧಿಯನ್ನೆ ದಾಟಿಸಿ 
ನಿನ್ನ ಆಳ್ವ ಮೋಹನ ವಿಠ್ಠಲ ರಾಯನ್ನ ಎನಗೆ ತೋರೆ - (3)

ಸಾಹಿತ್ಯ: ಮೋಹನದಾಸರು

ಹರಿದಾಸರಲ್ಲಿ ಮಹಿಳಾ ಹರಿದಾಸರಿಗೆ ವಿಟ್ಠಲ ದೀಕ್ಷೆಯನ್ನಿತ್ತು ಬಾಲವಿಧವೆಯಾಗಿದ್ದವರಿಗೂ ಸಹ ಅವರಿಗೆ ಸಾರ್ಥಕಜೀವನದ ದಾರಿಯನ್ನು ತೋರಿಕೊಟ್ಟವರಲ್ಲಿ ಮೋಹನದಾಸರು ಪ್ರಮುಖರು. 

ಈ ಮೇಲಿನ ರಚನೆಯು ಪದ್ಮ ಎಂಬ ಶಬ್ದವನ್ನು ವಿಶೇಷವಾಗಿ ಸುಂದರವಾಗಿ ಬಳಸಿದ ಮೊದಲ ಚರಣವನ್ನೂ ಸೇರಿದಂತೆ ಕೊಲ್ಲೂರ ಮೂಕಾಂಬಿಕೆಯ  ಸ್ತುತಿಯಾಗಿ ರಚಿಸಲ್ಪಟ್ಟಿದ್ದು ಪ್ರತಿಚರಣದಲ್ಲಿಯೂ ಸುಂದರವಾಗಿ ದ್ವಿತೀಯ ಪ್ರಾಸಗಳನ್ನೊಳಗೊಂಡ ಒಂದು ವಿಶೇಷ ರಚನೆ. ಕ್ಷೇತ್ರ ಗೀತ.

ಕೃಪೆ: ರೋಹಿಣಿ ಸುಬ್ಬುರತ್ನಂ Rohini Subbarathnam

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ