ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಲ್ಪನಾ ಅಯ್ಯಂಗಾರ್


 ಕಲ್ಪನಾ ಅಯ್ಯಂಗಾರ್


ಡಾ. ಕಲ್ಪನಾ ಮುಕುಂದ ಅಯ್ಯಂಗಾರ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸಾಧನೆ ಮಾಡುತ್ತಿದ್ದಾರೆ. 

ಸೆಪ್ಟೆಂಬರ್ 15, ಕಲ್ಪನಾ ಅವರ ಜನ್ಮದಿನ. ಕಡಬ ಮತ್ತು ಬಿಡಿಂಗನವಿಲೆ ವಂಶಾವಳಿಗೆ ಸೇರಿದ ಕುಟುಂಬದಲ್ಲಿ ಜನಿಸಿದ ಇವರು ಹಲ್ಲೋತೋಟ ಮಾವನೂರು ವಂಶದ ಸೊಸೆ.  ಕಲ್ಪನಾ ಅವರು ಹಾಸನದ ಅರಕಲಗೂಡು ವರದರಾಜುಲು ಕಾಂತಮ್ಮಾ ಮಹಿಳಾ ಕಾಲೇಜಿನಿಂದ ಬಿಎಸ್‍ಸಿ ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರ ಮತ್ತು ಕಾಮನ್‍ವೆಲ್ತ್ ಸಾಹಿತ್ಯದ ಕುರಿತಾಗಿ ಸ್ನಾತಕೋತ್ತರ ಪದವಿ ಪಡೆದರು.  ಜೊತೆಗೆ ಪೆನ್ಸಿಲ್ವೇನಿಯಾದ ಕುಟ್ಸ್ಟೌನ್ ವಿಶ್ವವಿದ್ಯಾಲಯದಿಂದ ಎರಡನೇ ಸ್ನಾತಕೋತ್ತರ ಪದವಿ ಪಡೆದರು. ಟೆಕ್ಸಾಸ್ - ಸಾನ್ ಆಂಟೋನಿಯೊ ವಿಶ್ವವಿದ್ಯಾಲಯದಿಂದ ಸಾಕ್ಷರತೆಯ ಸಂಶೋಧನಾ ಅಧ್ಯಯನದಲ್ಲಿ ಪಿಎಚ್.ಡಿ ಪಡೆದರು. ಮುಂದೆ ಇವರಿಗೆ ಬೈಕಲ್ಚರಲ್ ಬೈಲಿಂಗ್ಯುವಲ್ ಸ್ಟಡೀಸ್ ವಿಭಾಗದಿಂದ ಪೋಸ್ಟ್ ಡಾಕ್ಟೊರಲ್ ಫೆಲೋಷಿಪ್ ಸಂದಿತು. 

ಕಲ್ಪನಾ ಅವರ ಸಂಶೋಧನೆಗಳ ವಿಶಾಲತೆಯಲ್ಲಿ ಸಂಸ್ಕೃತಿಯನ್ನು ಕಾಯ್ದುಕೊಳ್ಳುವಿಕೆ, ಸಾಕ್ಷರತೆ, ಶಿಕ್ಷಕರನ್ನು ತಯಾರಿಗೊಳಿಸುವಿಕೆ, ಇಂಡಿಕ್ (ಸಂಸ್ಕೃತವನ್ನೊಳಗೊಂಡಂತೆ ಪಾರಂಪರಿಕ ಭಾರತೀಯ ಐರೋಪ್ಯ ಭಾಷೆಗಳು ಮತ್ತು ಆಧುನಿಕ ಭಾಷೆಗಳ) ಸಂಸ್ಕೃತಿ ಮತ್ತು ಬಹುಸಂಸ್ಕೃತಿ ಸಮನ್ವಯ ಶಿಕ್ಷಣ ಮುಂತಾದವು ಸೇರಿವೆ. 

ಡಾ. ಕಲ್ಪನಾ ಅಯ್ಯಂಗಾರ್ ಅವರು 2007 ವರ್ಷದಲ್ಲಿ ಪ್ರಸಿದ್ಧ San Antonio Writing Project Summer (SAWP) Instituteನ Fellow ಆಗಿ ಆಯ್ಕೆಗೊಂಡವರು. ಮುಂದೆ ಇದೇ ಸಂಸ್ಥೆಯಲ್ಲಿ  ಅವರ ಸೇವೆ,  ಶಿಕ್ಷಕಯಾಗಿ, ಸಲಹೆಗಾರ್ತಿಯಾಗಿ ಮತ್ತು ಸಹನಿರ್ದೇಶಕಿಯಾಗಿ ಸಲ್ಲುತ್ತಿದೆ. ತಮ್ಮ ಸಂಶೋಧನಾ ಆಸಕ್ತಿಗಳನ್ನು ನಿರಂತರವಾಗಿ ಕಾಯ್ದುಕೊಂಡಿರುವ ಇವರು, ಭಾರತದ ನೆಲದಲ್ಲಿ DSVV Haridwar Writing Project ಅನ್ನು ಸಹ-ಸಂಸ್ಥಾಪಕಿಯಾಗಿ / ಸಹ-ನಿರ್ದೇಶಕಿಯಾಗಿ ನಡೆಸಿದರು. ಡಾ. ಕಲ್ಪನಾ ಅಯ್ಯಂಗಾರ್ ಅವರು ಅವರ ಶಿಕ್ಷಕರಿಗೆ ತಯಾರಿ ಮತ್ತು ಸಾಕ್ಷರತೆಯ ಕುರಿತಾಗಿ ಯುಟಿಎಸ್ಎ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿದ್ದಾರೆ.  ಇವರು Center for Inquiry of Transformative Literacies ಪ್ರಾಯೋಜನೆಯ Family Literacy Projectನ ಪ್ರದಾನ ಬೊಧಕರಾಗಿದ್ದರು (lead faculty).ಇವರು ಡಿಎಸ್ಎಸ್‍ವಿಯಲ್ಲಿ ಸ್ಕಾಲರ್-ಇನ್-ರೆಸಿಡೆನ್ಸ್ ಆಗಿದ್ದು ಇಂಗ್ಲಿಷ್ ವಿಭಾಗಕ್ಕೆ ಸಂದರ್ಶಕ ಪ್ರಾಧ್ಯಪಕರಾಗಿದ್ದಾರೆ. ಡಾ. ಕಲ್ಪನಾ ಅಯ್ಯಂಗಾರ್ ಮತ್ತು ಡಾ. ಸ್ಮಿತ್ ಅವರು ಬೆಂಗಳೂರಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ, ಸಂದರ್ಶಕ ಪ್ರಾಧ್ಯಾಪಕರಾಗಿ Qualitative Methods ಕುರಿತಾಗಿ ಮೂರು ವಾರಗಳ ಪದವಿ ಕೋರ್ಸ್ ಅನ್ನು ನಡೆಸಿಕೊಟ್ಟಿದ್ದಾರೆ. 

ಕಲ್ಪನಾ ಅಯ್ಯಂಗಾರ್ ಅವರು ಪ್ರತಿಷ್ಟಿತ ಕಾಗ್ನೆಲ್ಲ ಪ್ರಕಾಶನದ 2021ರಲ್ಲಿ ಪ್ರಕಟಗೊಂಡ  “Diversity in Society and Schools” ಸಂಪುಟವನ್ನು ಡಾ. ಸ್ಮಿತ್ ಅವರೊಂದಿಗೆ ಸಹಸಂಪಾದನೆ ಮಾಡಿದ್ದಾರೆ.  ಐಜಿಐ ಪ್ರಕಾಶನದ ಪುಸ್ತಗಳಲ್ಲಿನ ಹಲವಾರು ಅಧ್ಯಾಯಗಳನ್ನು ಬರೆದಿದ್ದಾರೆ.  ವಿಶ್ವಪ್ರಸಿದ್ಧ ವಿದ್ವಾಂಸರುಗಳ ವಿಮರ್ಶೆ ಪಡೆಯುತ್ತಿರುವ Educational Studies, South Asian Review, Dev Sanskriti Interdisciplinary (DSVV) Journal, and English in Texas ಮಂತಾದ ಪ್ರಕಟಣೆಗಳಲ್ಲಿನ ಲೇಖನಗಳಿಂದ ವಿಶ್ವಮಾನ್ಯರಾಗಿದ್ದಾರೆ. ಇವರ ಸಹಸಂಪಾದಕತ್ವದ 'volume on biliteracy development' ಕೆಂಡಾಲ್ ಹಂಟ್ ಪ್ರಕಾಶನದಿಂದ 2022ರಲ್ಲಿ ಮೂಡಿಬಂದಿದೆ. ಇವರ ಸಹಸಂಪಾದಕತ್ವದ 'Teaching on Writing in the Diaspora: Scaffolding Educators and Students’ 2023ರಲ್ಲಿ ಹೊರಬಂದಿದೆ.  ಇವರ ಹೊಸ ಯೋಜನೆಯಾದ "a volume on Voices and Perspectives of Women and Girls from Minoritized Communities in Sciences, Humanities, Technology, Engineering, Mathematics (SHTEM) Education" ಕೇಂಬ್ರಿಡ್ಜ್ ಸರಣಿಯಲ್ಲಿ 2025ರಲ್ಲಿ ಪ್ರಕಟವಾಗುತ್ತಿದೆ. ಕನ್ನಡ ಸಾಹಿತ್ಯದ ಕುರಿತಾಗಿ ಅಧ್ಯಯನಕ್ಕೆ ಮಾರ್ಗದರ್ಶಿಯಾದ (curated edition on Regional Kannada Literature: Critical Perspectives) ಕನ್ನಡ ನೆಲದ ಪ್ರತಿಭಾನ್ವಿತರ ಬರಹಗಳನ್ನೊಳಗೊಂಡ,  ಕಲ್ಪನಾ ಅಯ್ಯಂಗಾರ್ ಅವರು ತಿರು ಶ್ರೀಧರ ಮತ್ತು ಡಾ. ಮಾಲಿನಿ ಮೋಹನ್ ಅವರ ಸಹಸಂಪಾದಕತ್ವದಲ್ಲಿ ಹೊರತರುತ್ತಿರುವ ಕೃತಿಯು 2025 ವರ್ಷದಲ್ಲಿ ಪ್ರಕಟಗೊಳ್ಳಲಿದೆ. 

ಸಾಕ್ಷರತೆಯಲ್ಲಿನ ಸೇವೆಗಾಗಿ ಕಲ್ಪನಾ ಅವರಿಗೆ National Council of Teachers of English ವತಿಯಿಂದ Distinguished Early College Educator of Color Award ಗೌರವ ಸಂದಿದೆ. ಇವರ ಸಂಶೋದನೆ ಮತ್ತು ಪ್ರಕಟಣಾ ಕಾಯಕದಲ್ಲಿನ ದಾಖಲೆಗಳನ್ನು ಅವಲೋಕಿಸಿ,  ಇವರಿಗೆ 2024-25 ಅವಧಿಗೆ ಸಾನ್ ಆಂಟೋನಿಯೊ ಕಾಲೇಜಿನ Teaching and Writing Institute faculty grant-funded fellowship ಸಲ್ಲಿಸಲಾಗಿದೆ. 

ಡಾ. ಕಲ್ಪನಾ ಅಯ್ಯಂಗಾರ್ ಅವರ ಆಯ್ದ ಪ್ರಕಟಣೆಗಳ ಕಿರುಮಾಹಿತಿ ಇಂತಿದೆ:
Iyengar, K. M. (2022). Kahani Literacy Project: “Culturalized” Writing. In Handbook of Research on Promoting Global Citizenship Education (pp. 209-227). IGI Global.

Iyengar, K. M., and Smith, H.L. (2021). Kahani Literacy Project: Culturally Sustaining Story Writing. In Anastassiou Fatoni (Ed.), Biliteracy and Multiliteracies: Building Paths to the Future (pp. 145 -165). 

Iyengar, K. M., & Smith, H. L. (2020). Growing Up in the Diaspora: South-Asian Children. South Asian Review, 41(1), i-iii.

Iyengar, K. M., & Smith, H. L. (2020). 
The Sacred Bharatanatyam Dance: 
Transcendental Aesthetics. South Asian Review, 41(1), 69-86.

Iyengar, K.M., & Smith, H.L. (2019). Asian Indian students’ perceptions and attitudes toward American pedagogies with the Shakespearean sonnet. In Priti Bala Sharma & Pavan Chakravarthy (Eds.), Emerging trends and challenges in teaching English language and literature (pp. 29-44). Adhyayan Publishers.

Iyengar, K. M., & Smith, H. L. (2019). 
Technology Meets Affect: Scaffolding Students' Socio-Emotional Needs Through Virtual Learning. In the Handbook of Research on Virtual Training and Mentoring of Online Instructors (pp. 345-363). IGI Global.

Iyengar, K. M., & Smith, H. L. (2016). Asian Indian American Children's Creative  Writing: An Approach for Cultural Preservation. Educational Studies, 52(2), 95-118.

Iyengar, K. M., & Smith, H. L. Kahani Literacy Project: Culturally Efficacious Story Writing. Innovation in Language Learning Conference. Italy, 2022. 

Iyengar, K.M. (2024). A picture says a thousand words and texts uncover myriad images. Journal of Literacy  Innovation  8(2), 32-51.

ಸಾಧಕಿ, ಸರಳ ಸಹೃದಯಿ ಕನ್ನಡತಿ, ಆತ್ಮೀಯರಾದ ಡಾ. ಕಲ್ಪನಾ ಅಯ್ಯಂಗಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Dr. Kalpana Iyengar 🌷🙏🌷




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ