ಸುಶೀಲಾ ಸದಾಶಿವಯ್ಯ
ಸುಶೀಲಾ ಸದಾಶಿವಯ್ಯ
ಸುಶೀಲಾ ಸದಾಶಿವಯ್ಯ ಬರಹಗಾರ್ತಿಯಾಗಿ, ಕನ್ನಡ ಸಂಘಟನಾ ಕಾರ್ಯದಲ್ಲಿ ನಿರತರಾಗಿ, ಸಮಾಜಮುಖಿಯಾಗಿ ಹೆಸರಾಗಿದ್ದಾರೆ.
ಸೆಪ್ಟೆಂಬರ್ 9, ಸುಶೀಲಾ ಅವರ ಜನ್ಮದಿನ. ತುರುವೇಕೆರೆ ಮೂಲದವರಾದ ಇವರು ತಮ್ಮ ಕುಟುಂಬದೊಂದಿಗೆ ತುಮಕೂರಿನಲ್ಲಿ ನೆಲೆಸಿದ್ದಾರೆ. ಸುಶೀಲಾ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದವರು.
ಸುಶೀಲಾ ಅವರು ಕೆಲವು ವರ್ಷಗಳ ಕಾಲ, ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಗಳಿಸಿ ಸಾಹಿತ್ಯ ಮತ್ತಿತ್ತರ ಕ್ರಿಯಾಶೀಲ ಆಸಕ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಕಥೆ, ಕವಿತೆ, ಗಜಲ್, ವಚನ, ಅಧ್ಯಾತ್ಮ, ಪ್ರಬಂಧ, ಪ್ರವಾಸ ಕಥನ, ಕೃಷಿ ಹೀಗೆ ಸುಶೀಲಾ ಅವರ ಬರಹಗಳು ಬಹುಮುಖಿಯಾದದ್ದು. ಇವರ ಬರಹಗಳು ನಿರಂತರವಾಗಿ ನಾಡಿನ ಪ್ರಖ್ಯಾತ ನಿಯತಕಾಲಿಕಗಳಲ್ಲಿ ಕಂಗೊಳಿಸಿವೆ. ಅನೇಕ ಪ್ರಖ್ಯಾತ ಸಂಸ್ಥೆಗಳ ಕೃತಿ ಸಂಕಲನಗಳಲ್ಲಿ ಇವರ ಬರಹಗಳು ಸೇರಿವೆ. ಸಂಘಟನಾ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ.
ಸಾಕಾರ, ಚಿತ್ತ ಕಲಕಿದಾಗ, ಪ್ರೇಮವೆಂದರೆ ಎಂಬ ಕವಿತಾ ಸಂಕಲನಗಳು, ಆರೋಗ್ಯದ ಅಕ್ಷಯ ತೆಂಗು, ತನುವಿನೊಳಗಣ ಕರ್ಪೂರ (ಆಧುನಿಕ ವಚಗಳು) ಸ್ವಾತಂತ್ರ್ಯ ಹೋರಾಟಗಾರ್ತಿ ಜೆ. ಸಿ. ಭಾಗೀರಥಮ್ಮ, 12ನೇ ಶತಮಾನದ ಶಿವಶರಣರು, ಉಪಮಾತೀತರು ಮುಂತಾದವು ಸುಶೀಲಾ ಅವರ ಪ್ರಕಟಿತ ಕೃತಿಗಳಲ್ಲಿ ಸೇರಿವೆ. ಆಕಾಶಕ್ಕೆ ಒಂದು ಬೊಗಸೆ (ಕತೆಗಳು), ಪುಟ್ಟನ ಕವಿತೆಗಳು, ನಿಶೂನ್ಯದೆಡೆಗೆ ಪ್ರಕಟಣೆಯ ಪ್ರಕ್ರಿಯೆಯಲ್ಲಿದೆ.
ಸುಶೀಲಾ ಅವರು ಮೈಸೂರು ದಸರಾ ಕಾವ್ಯ ಸಮ್ಮೇಳನ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಕಾವ್ಯ ಮತ್ತು ವಿಚಾರ ಮಂಡನೆಗೆ ಹೆಸರಾಗಿದ್ದಾರೆ. ಸಂಕ್ರಮಣ ಕಾವ್ಯ ಪ್ರಶಸ್ತಿ, ಕಸಾಪ ದತ್ತಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಇವರಿಗೆ ಸಂದಿವೆ.
ಸುಶೀಲಾ ಸದಾಶಿವಯ್ಯ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು ನಮಸ್ಕಾರ.
(Happy birthday Susheela Sadashivaya 🌷🌷🌷
ಕಾಮೆಂಟ್‌ಗಳು