ಶಿವಕಾಮೇಶ್ವರೀಂ ಚಿಂತಯೇಹಂ
ಶಿವಕಾಮೇಶ್ವರೀಂ ಚಿಂತಯೇಹಂ
ಶೃಂಗಾರ ರಸ ಸಂಪೂರ್ಣಕರೀಂ ||
ಶಿವ ಕಾಮೇಶ್ವರ ಮನಃ ಪ್ರಿಯಕರೀಮ್
ಶಿವಾನಂದ ಗುರುಗುಹ ವಶಂಕರೀಮ್||
ಶಾಂತ ಕಲ್ಯಾಣ ಗುಣಶಾಲಿನೀಮ್
ಶಾಂತ್ಯತೀತ ಕಲಾಸ್ವರೂಪಿಣೀಮ್
ಮಾಧುರ್ಯ ಗಾನಾಮೃತ ಮೋದಿನೀಮ್
ಮದಾಲಸಾಂ ಹಂಸೋಲ್ಲಾಸಿನೀಮ್
ಚಿದಂಬರಪುರೀಶ್ವರೀಂ ಚಿದಗ್ನಿಕುಂಡ ಸಂಭೂತ ಸಕಲೇಶ್ವರೀಂ ||
ಸಾಹಿತ್ಯ: ಮುತ್ತುಸ್ವಾಮಿ ದೀಕ್ಷಿತರು
ಸೂಚನೆ: ಇದು ಕನ್ನಡದಲ್ಲಿ ಶ್ರೇಷ್ಠ ಕೃತಿಯೊಂದರ ಕುರಿತು ಹೇಳುವ ಪ್ರಯತ್ನ. ತಪ್ಪಿದ್ದರೆ ತಿದ್ದಿ
ಮುದ್ದುಸ್ವಾಮಿ ದೀಕ್ಷಿತರು ಪರಮ ಶ್ರೀವಿದ್ಯಾ ಉಪಾಸಕರು. ಅವರ ಕೀರ್ತನೆಗಳು ಶ್ರೀವಿದ್ಯಾ ರಹಸ್ಯಗಳೂ, ತಂತ್ರಶಾಸ್ತ್ರವೂ, ಲಲಿತಾ ಸಹಸ್ರನಾಮ, ತ್ರಿಶತಿ ಮುಂತಾದವೂ ಒಳಗೊಂಡಿದ್ದು, ಆ ಕೀರ್ತನೆಗಳನ್ನು ಗಾಯನ - ವಾದನ - ಶ್ರವಣಗಳಿಂದ ಪುಣ್ಯವು ಲಭಿಸುತ್ತದೆಂಬ ನಂಬಿಕೆ ಆಸ್ತಿಕಜನರಲ್ಲಿದೆ
ಕೀರ್ತನೆಯ ಭಾವಾರ್ಥ:
ನಾನು ಶಿವಕಾಮೇಶ್ವರಿ ದೇವಿಯ ಬಗ್ಗೆ ಸದಾ ಚಿಂತಿಸುತ್ತೇನೆ. ರಸಗಳಲ್ಲಿಯೇ ರಸಶ್ರೇಷ್ಠವೆನಿಸಿದ ಶೃಂಗಾರರಸದ ಪರಿಪೂರ್ಣ ಪ್ರಾಪ್ತಿಯನ್ನು ಆಕೆ ಕರುಣಿಸುತ್ತಾಳೆ.
ಶ್ರೀಮಾತೆಯು ಶಿವಕಾಮೇಶ್ವರನ ಮನದ ಪ್ರೀತಿಪಾತ್ರಳಾಗಿದ್ದು
ಶಿವಾನಂದದ ಸ್ವರೂಪಿಯಾಗಿಯೇ ಗುರುಗುಹನಲ್ಲಿ ವಾಸಿಸುತ್ತಿರುವವಳು.
ಅವಳು ಪ್ರಶಾಂತ ಗುಣಲಕ್ಷಣಗಳೊಂದಿಗೆ ಮಂಗಳಕರಳು.(ಶಾಂತಕಲ್ಯಾಣವೆಂಬುದು ರಾಗಮುದ್ರೆಯೂ ಹೌದು. ಮೇಚಕಲ್ಯಾಣಿಯ ಪೂರ್ವನಾಮವು ಶಾಂತಕಲ್ಯಾಣಿ ಎಂಬುದು). ಮಂಗಳಕರ(ಶಿವತ್ತ್ವದವ)ಳಾದ ಈಕೆಯದು ಕಲಾಸ್ವರೂಪ. (ಶ್ರೀವಿದ್ಯೆಯ 16 ಕಲೆಗಳನ್ನೂ ಹೊಂದಿ ಅದೇ ಸ್ವರೂಪವಾದ) ಈಕೆ ಗಾನಾಮೃತದ ಮಾಧುರ್ಯದಲ್ಲಿ ಸದಾ ಸುಖಿಸುವವಳು. ಜ್ಞಾನವೆಂಬ ಮಧುಪಾನ ಮಾಡಿ ಮತ್ತಳಾದವಳು. (ಮಧುವೆಂಬ ಮೋಕ್ಷವಿದ್ಯೆಯೂ ಇದೆ. ಮೋಕ್ಷದ ಪರಮಾನಂದದಲ್ಲಿ ಮತ್ತಳಾದವಳು) ಸಹಸ್ರಾರದಲ್ಲಿ ಪರಮಹಂಸ ಸ್ವರೂಪದಲ್ಲಿ ಅನುಭಾವಿಯಾಗಿರುವ ಈಕೆ ಸದಾ ಪರಮಾನಂದದಲ್ಲಿ ತಲ್ಲೀನಳು. ಆಕೆ ಚಿತ್ +ಅಂಬರ =ಚಿದಾಕಾಶದಲ್ಲಿ ರಾಜ್ಞಿಯಾಗಿರುವವಳು (ಚಿದಂಬರಂ ನಾಥನ ರಾಣಿ. ಇಲ್ಲಿ ಕ್ಷೇತ್ರಮುದ್ರೆಯೂ ಇದೆ). ಚಿತ್ ಎಂಬ ಅಗ್ನಿಕುಂಡದಿಂದ ಜನಿಸಿವಳು. ಆಕೆ ಬ್ರಹ್ಮಾಂಡನಾಯಕಿ.
ಭಾವಾರ್ಥ ಸಹಾಯ: ವಿದುಷಿ ರೋಹಿಣಿ ಸುಬ್ಬುರತ್ನಂ Rohini Subbarathnam 🌷🙏🌷
I always contemplate upon Goddess Siva Kameswari. She bestows fulfillment in love.
She fascinates the mind of Lord Siva Kameswara.
She is auspicious with serene attributes. She is personification of arts. She is engrossed in nectarine music. She is passionate. She revels in Supreme spirit. She is queen of Chidambaram. She is born from holy sacrificial Fire. She is queen of the universe.
ಕಾಮೆಂಟ್‌ಗಳು