ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆಂಗಳೂರು ನಾರಾಯಣರಾವ್ ಪ್ರಕಾಶ್


ಬೆಂಗಳೂರು ನಾರಾಯಣರಾವ್ ಪ್ರಕಾಶ್

ಇಂದು ಆತ್ಮೀಯ ಹಿರಿಯರೂ, ನನ್ನ ಕೈಂಕರ್ಯಗಳ ನಿರಂತರ ಪ್ರೋತ್ಸಾಹಕರೂ ಆದ ಬೆಂಗಳೂರು ನಾರಾಯಣರಾವ್ ಪ್ರಕಾಶ್ ಅವರ ಜನ್ಮದಿನ.

ಬಿ. ಎನ್. ಪ್ರಕಾಶ್ ಅವರು ಮಹಾನ್ ಕಲಾವಿದರ ಕುಟುಂಬದವರು.  ಇವರ ತಂದೆ ಬಿ. ಎಸ್. ನಾರಾಯಣ ರಾವ್ ಅವರು ರಂಗಭೂಮಿಯಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಹಾನ್ ಹೆಸರು.  ಪ್ರಕಾಶ್ ಅವರ ಪತ್ನಿಯ ತಂದೆ ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದ ಮಹಾನ್ ಕಲಾವಿದ ಸಿ. ವಿಶ್ವನಾಥ ರಾವ್.  (ಸಿ. ವಿಶ್ವನಾಥರಾವ್ ಅವರ ಸಹೋದರ ಸುಗಮ ಸಂಗೀತ ಲೋಕದ ಮಹಾನ್ ತಾರೆ ಸಿ. ಅಶ್ವಥ್.  ಈ ಸಹೋದರರಲ್ಲಿ ಮತ್ತೊಬ್ಬರಾದ ಸಿ. ನಾಗರಾಜ ರಾವ್ ಅವರೂ ಮಹಾನ್ ಕಲಾವಿದರು).

ಬ್ಯಾಂಕಿಗ್ ವೃತ್ತಿಯಲ್ಲಿ ಅಧಿಕಾರಿಗಳಾಗಿದ್ದ ಪ್ರಕಾಶ್ ಅವರು ಸಾಹಿತ್ಯ,‍ ಸಂಗೀತ ಮತ್ತು ರಂಗಕ್ಷೇತ್ರಗಳ ಅಭಿಮಾನ ಮೂಡಿಸಿಕೊಂಡವರು.  ಈ ಕುರಿತು ಕೆಲಸ ಮಾಡುವವರೆಲ್ಲರ ಕುರಿತು ಇವರಿಗೆ ಅಪಾರ ಒಲವು ಮತ್ತು ಮೆಚ್ಚುಗೆ. ಬೆಂಗಳೂರು ನಾರಾಯಣರಾವ್ ಪ್ರಕಾಶ್ ಅವರು ನನಗೆ ಹಲವಾರು ವಿಚಾರಗಳ ಕುರಿತು ಆಪ್ತವಾಗಿ ಬೆಳಕು ಚೆಲ್ಲುತ್ತ ಪ್ರೋತ್ಸಾಹಿಸುತ್ತ ಬಂದವರು.

ಹಿರಿಯರಾದ ಪ್ರಕಾಶ್ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಮಸ್ಕಾರ.🌷🙏🌷

Happy birthday Bangalore Narayanarao Prakash Sir🌷🙏🌷





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ