ವಿ. ಕಮಲಾಕರ ರಾವ್
ವಿ. ಕಮಲಾಕರ ರಾವ್
ಕಮಲಾಕರ ರಾವ್ ಮಹಾನ್ ಮೃದಂಗ ವಿದ್ವಾಂಸರಾಗಿದ್ದವರು. ಶ್ರೀಯುತರು1937 ವರ್ಷದಲ್ಲಿ ರಾಜಮಂಡ್ರಿಯಲ್ಲಿ ಜನಿಸಿದರು. ವಿ. ವೈ. ನಾರಾಯಣ ಶಾಸ್ತ್ರಿ, ಯೆಲ್ಟಾ ಸೊಮಣ್ಣ ಮತ್ತು ಪಾಲ್ಗಾಟ್ ಮಣಿ ಅಯ್ಯರ್ ಅಂತಹ ಶ್ರೇಷ್ಠರ ಬಳಿ ನಿಷ್ಠೆಯಿಂದ ಕಲಿತು ನಿಪುಣರಾದರು.
ಕಮಲಾಕರ ರಾವ್ ಅವರು ದೇಶದ ಎಲ್ಲ ಮಹಾನ್ ಕಲಾವಿದರಿಗೆ ಮೃದಂಗ ಸಹಯೋಗವಲ್ಲದೆ, ಮೃದಂಗ ಪ್ರಧಾನ ಕಛೇರಿಗಳನ್ನು ನೀಡಿ, ವಿಶಿಷ್ಟ ಆಲ್ಬಂಗಳನ್ನೂ ಮೂಡಿಸಿದರು. ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡಿ ಶೋಭಿಸಿದರು.
ಕಮಲಾಕರ ರಾವ್ ಅವರಿಗೆ ಅನೇಕ ಗೌರವಗಳಲ್ಲದೆ, 1999-2000 ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಸಂದಿತ್ತು.
ಕಮಲಾಕರ ರಾವ್ ಅವರು 2024 ನವೆಂಬರ್ 11ರಂದು ನಿಧನರಾದರು. ಆ ಮಹಾನ್ ಹಿರಿಯ ಕಲಾಚೇತನಕ್ಕೆ ನಮನ 🌷🙏🌷
Great Mrudunga Vidwan V. Kamalakar Rao 🌷🙏🌷

ಕಾಮೆಂಟ್‌ಗಳು