ಸೇವಕನ ಮಾಡು
ಸೇವಕನ ಮಾಡು ನಿನ್ನಂತೆ ನನ್ನ 🌷🙏🌷
ರಾಮಚಂದ್ರನ ಸೇವಿಸಿ, ಪೂಜಿಸಿ
ಧನ್ಯನಾಗುವಂತೆ ಹರಸಿ ನನ್ನ😇
ಸೇವಕನ ಮಾಡು ಮಾರುತಿ 🌷🙏🌷
ಸೇವಕನಾದರೆ ದೊರೆಯುವ ಪ್ರಭುವಿನ
ಕರುಣೆಗೆ ಎಣೆಯೇ ಇಲ್ಲ
ಸೇವೆಯು ನೀಡುವ ಮಹದಾನಂದವ
ಬಣ್ಣಿಸೆ ಮಾತುಗಳಿಲ್ಲ
ಸೇವೆಯು ಕೊಡುವ ಫಲದ ಕಲ್ಪನೆಯು
ಕಲ್ಪವೃಕ್ಷಕು ಇಲ್ಲ 🌷🙏🌷
ಸೇವಕನೆಂದೇ, ನಂದಿಗೆ ದೊರಕಿತು
ಕೈಲಾಸದಲಿ ಸ್ಥಾನ
ಸೇವಕನಾಗೆ, ಗರುಡನು ಪಡೆದ
ವ್ಯಕುಂಠದಲಿ ತಾಣ
ಸೇವಕನಾದರೆ ನನ್ನಲಿ, ಆಗ
ಕರಗುವುದು ಅಜ್ಞಾನ 😇
ಸೇವಕನಾಗೆ, ಎಲ್ಲ ಶಕ್ತಿಯು
ನಿನ್ನ ಕೈ ಸೇರಿತು ಹನುಮ
ಪೂಜೆಯು ಹೊಂದುವ ಭಾಗ್ಯ ನೀಡಿತು
ನಿನಗಾ ರಾಮ ನಾಮ 😇
ನನ್ನೀ ಜನುಮವು ಸಾರ್ಥಕ ತಂದೆ
ಪಡೆದರೆ ನಿನ್ನ ಪ್ರೇಮ 😇
ಸೇವಕನ ಮಾಡು ನಿನ್ನಂತೆ ನನ್ನ 🌷🙏🌷
ರಾಮಚಂದ್ರನ ಸೇವಿಸಿ, ಪೂಜಿಸಿ
ಧನ್ಯನಾಗುವಂತೆ ಹರಸಿ ನನ್ನ 😇
ಸೇವಕನ ಮಾಡು ಮಾರುತಿ 🌷🙏🌷
ಸಾಹಿತ್ಯ: ಚಿ. ಉದಯಶಂಕರ
ಸಂಗೀತ: ಪಿ. ಉಪೇಂದ್ರ ಕುಮಾರ್
ಗಾಯನ: ರಾಜ್‍ಕುಮಾರ್
ಕೃತಜ್ಞತೆ: ಈ ಚೆಂದದ ಮಾರುತಿಯ ಚಿತ್ರ ಇಂದು ಕಳಿಸಿದವರು ಪೂಜ್ಯ ಪ್ರೊ. ತೋಂಟದಾರ್ಯ ಸಂಪಿಗೆ. Thontadarya Sampige ಅವರು
ಇಲ್ಲಿ ಕೇಳೋಣ
https://youtu.be/C9kuMHWJDKE?feature=shared
ಕಾಮೆಂಟ್‌ಗಳು