ಅರ್ಪಿತಾ ಎಸ್. ಕೋಟಿ
ಅರ್ಪಿತಾ ಎಸ್. ಕೋಟಿ
ಅರ್ಪಿತಾ ಎಸ್. ಕೋಟಿ ಅವರು ಕಲಾಲೋಕದಲ್ಲಿ ಬಹಳಷ್ಟು ಸಾಧಿಸಿರುವ ಯುವ ಕಲಾಪ್ರತಿಭೆ ಮತ್ತು ಕಲಾಶಿಕ್ಷಕಿ.
ನವೆಂಬರ್ 21, ಅರ್ಪಿತಾ ಅವರ ಜನ್ಮದಿನ. ಇವರು ಧಾರವಾಡದವರು. ತಂದೆ ಶಿವಯೋಗಿ. ತಾಯಿ ಉಮಾ ಕೋಟಿ. ಅರ್ಪಿತಾ ಅವರಿಗೆ ಗುರೂಜಿ ಎ. ಪಿ. ಪಾಟೀಲ ಅವರಿಂದ ಚಿತ್ರಕಲೆಯಲ್ಲಿ ಮಾರ್ಗದರ್ಶನ ದೊರಕಿತು. ಇವರು ಚಿತ್ರಕಲಾ ಪರಿಷತ್ತಿನಲ್ಲಿ ಕಲಾ ಪದವಿ ಸಾಧನೆ ಹಾಗೂ ಧಾರವಾಡ ವಿಶ್ವವಿದ್ಯಾಲಯದಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿ ಸಾಧನೆ ಪಡೆದಿದ್ದಾರೆ. ಚಿತ್ರಕಲೆಯಲ್ಲದೆ ಶಿಲ್ಪಕಲೆಯಲ್ಲೂ ಇವರಿಗೆ ಪ್ರಾವೀಣ್ಯತೆ ಸಿದ್ದಿಸಿದೆ.
ಅರ್ಪಿತಾ ಅವರು ಅನೇಕ ಏಕವ್ಯಕ್ತಿ ಪ್ರದರ್ಶನಗಳು ಮತ್ತು ಸಮೂಹ ಕಲಾ ಪ್ರದರ್ಶನಗಳಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದಾರೆ. ಅನೇಕ ಕಲಾ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಅರ್ಪಿತಾ ಎಸ್. ಕೋಟಿ ಅವರಿಗೆ ಅನೇಕ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕಲಾಸ್ಪರ್ಧೆಗಳಲ್ಲಿ ಬಹುಮಾನ ಮೆಚ್ಚುಗೆಗಳು ಸಂದಿವೆ.
ಪ್ರತಿಭಾನ್ವಿತ ಕಲಾವಿದೆ ಅರ್ಪಿತಾ ಎಸ್. ಕೋಟಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday Arpita S Koti 🌷🌷🌷
ಕಾಮೆಂಟ್‌ಗಳು