ಜ್ಯೋತಿ ರಾಜೇಶ್
ಜ್ಯೋತಿ ರಾಜೇಶ್
ಜ್ಯೋತಿ ರಾಜೇಶ್ ಅವರು ಬಹುಮುಖಿ ಬರಹಗಾರ್ತಿ. ನಮ್ಮ ಸುತ್ತಮುತ್ತಲಿನ ಬದುಕು, ವಸ್ತು, ಸನ್ನಿವೇಶ, ವ್ಯಕ್ತಿ, ವೈವಿಧ್ಯಗಳನ್ನು ತಮ್ಮ ಸದಭಿರುಚಿಯ ಹಾಸ್ಯಲೇಪನದಿಂದ ಮೂಡಿಸುವ ಇವರ ಬರಹಗಳು ಎಲ್ಲರಿಗೂ ಅಚ್ಚುಮೆಚ್ಚು.
ನವೆಂಬರ್ 22, ಜ್ಯೋತಿ ಅವರ ಜನ್ಮದಿನ. ಶಿವಮೊಗ್ಗ ಜಿಲ್ಲೆಯವರಾದ ಇವರ ವ್ಯಾಸಂಗ, ಕೊಪ್ಪ, ತೀರ್ಥಹಳ್ಳಿಗಳಲ್ಲಿ ನಡೆಯಿತು. ಹಲವು ಕಾಲ ಕುದುರೆಮುಖದ ಸುಂದರ ಪರಿಸರದಲ್ಲಿ ಕುಟುಂಬದೊಂದಿಗಿದ್ದ ಇವರು ಮುಂದೆ ಮಂಗಳೂರಿನವರಾಗಿದ್ದಾರೆ.
ಜ್ಯೋತಿ ರಾಜೇಶ್ ಅವರು ಮೂಡಿಸಿರುವ, ಹಾಸ್ಯ ಲೇಖನ, ಕಥೆ, ಪ್ರಬಂಧ, ಚಿಂತನ, ಸಂಸ್ಕೃತಿ ಇತ್ಯಾದಿ ಬರಹಗಳು ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಮೂಡಿವೆ. ಬದುಕಿನ ಸೂಕ್ಷ್ಮತೆಗಳನ್ನು ಹಾಸ್ಯದ ಕಣ್ಣಿನಿಂದ ನೋಡುವ ಇವರ ಕೃತಿ "ಹಾಸ್ಯೋಪಾಸನೆ” ಎಂಬ ಅನ್ವರ್ಥ ಹೆಸರನ್ನು ಹೊಂದಿದೆ.
ಜ್ಯೋತಿ ರಾಜೇಶ್ ಅವರು ಕಥಾಗುಚ್ಛ ಸಾಹಿತ್ಯ ಸಮೂಹದಲ್ಲಿಯೂ ಸಕ್ರಿಯರು. ಅವರಿಗೆ ಅನೇಕ ಬಹುಮಾನಗಳು ಸಂದಿವೆ. ಆತ್ಮೀಯ ಸಮುದಾಯಗಳಲ್ಲಿ ಆಹ್ವಾನಿತರಾಗಿ ತಮ್ಮ ಹಾಸ್ಯಮಾತುಗಳಿಂದ ರಂಜಿಸಿದ್ದಾರೆ.
ತಮ್ಮ ಪ್ರವೃತ್ತಿಗಳಲ್ಲಿ ಉತ್ಸಾಹ, ಹಾಸ್ಯಪ್ರಜ್ಞೆ ಮತ್ತು ಸರಳತೆಯ ಭಾವಗಳನ್ನು ರೂಡಿಸಿಕೊಂಡಿರುವ ಆತ್ಮೀಯರಾದ ಜ್ಯೋತಿ ರಾಜೇಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Jyothi Rajesh 🌷🌷🌷
ಕಾಮೆಂಟ್‌ಗಳು