ಮಾಳವಿ
ಮಾಳವಿ
ಮಹಾನ್ ಸಂಗೀತ ವಿದ್ವಾಂಸರಾದ ಮೈಸೂರು ಮಹಾದೇವಪ್ಪನರ ಮೊಮ್ಮಗಳು, ವಿಶ್ವ ಖ್ಯಾತಿಯ ಮೈಸೂರು ಮಂಜುನಾಥ್ Mysore Manjunath ಮತ್ತು ಸುಮಾ ಮಂಜುನಾಥ್ Suma Manjunath ದಂಪತಿಗಳ ಸುಪುತ್ರಿ, ಸಂಗೀತಲೋಕದ ಸುಮಧುರ ಮಾಳವಿ ರಾಗವನ್ನೇ ಹೆಸರಾಗಿ ಹೊಂದಿ, ಅದರಷ್ಟೇ ಮಾಧುರ್ಯವನ್ನು ಸಂಗೀತಲೋಕದಲ್ಲಿ ಪಸರಿಸುತ್ತಿರುವ ಪ್ರತಿಭಾನ್ವಿತ ಬಾಲಕಿ ಮಾಳವಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಎಂಥ ಭವ್ಯ ಕುಟುಂಬ. ಒಂದೇ ಮನೆಯಿಂದ ಮೈಸೂರು ಮಹಾದೇವಪ್ಪ, ಮೈಸೂರು ನಾಗರಾಜ್ - ಮೈಸೂರು ಮಂಜುನಾಥ್, ಮೈಸೂರು ಕಾರ್ತಿಕ್, ಸುಮಂತ್ ಮಂಜುನಾಥ್ ಮತ್ತು ಮಾಳವಿ. ನೀವೆಲ್ಲ ನಮ್ಮ ಹೆಮ್ಮೆ.
ಇನ್ನೂ ಹೈಸ್ಕೂಲಿನಲ್ಲಿರುವ ಮಾಳವಿ ಸಂಗೀತದಲ್ಲಿ ಮೂಡಿಸುತ್ತಿರುವ ನಾದ ತರಂಗಗಳು ಅನುಪಮವಾದದ್ದು. ಮಾಳವಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ಈ ಸಮಸ್ತ ಸಂಗೀತ ಕುಟುಂಬಕ್ಕೆ ಶುಭಹಾರೈಕೆ.
Happy birthday Malavi 🌷🌷🌷
ಕಾಮೆಂಟ್ಗಳು