ಬಂದಾಳು ಮಹಾಲಕುಮಿ
ಬಂದಾಳು ನಮ್ಮ ಮನೆಗೆ
ಶ್ರೀ ಮಹಾಲಕುಮಿ ಸಂದೇಹ ವಿಲ್ಲದಲೆ
ಬಂದಾಳು ನಮ್ಮ ಮನೆಗೆ
ನಿಂದಾಳು ಗೃಹದಲಿ
ನಂದ ಕಂದನ ರಾಣಿ ಇಂದಿರೆ
ಬಂದಾಳು ನಮ್ಮ ಮನೆಗೆ
ಹೆಜ್ಜೆ ಯ ಮೇಲೆ ಹೆಜ್ಜೆ ನಿಕ್ಕುತ
ಗೆಜ್ಜೆಯ ಕಾಲ ಘಲ್ಲು ಘಲ್ಲು ರೆನುತಾ
ಮೂರ್ಜಗವ ಮೋಹಿಸುತಾ
ಮುರಹರನ ರಾಣಿಯು
ಸಂಪತ್ತು ಕೊಡಲಿಕ್ಕೆ ವೆಂಕಟೇಶನ ಸಹಿತ
ಮಾಸ ಶ್ರಾವಣ ಶುಕ್ಲ ಶುಕ್ರವಾರ
ಪೌರ್ಣಿಮೆ ದಿನಮುನ್ನ
ಭೂಸುರರೆಲ್ಲಾ ಕೂಡಿ ಸಾಸಿರ ನಾಮ
ಪಾಡಿ ವಾಸ ವಾಗಿರಲಿಕ್ಕೆ ವಾಸುದೇವನ ಸಹಿತಾ
ಉಟ್ಟ ಪೀತಾಂಬರ ಹೊಳೆಯುತಾ
ಕರದಲಿ ಘಟ್ಟಿ ಕಂಕಣ ಹಿಡಿಯುತ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ
ಪಟ್ಟದರಸಿ ನಮಗೆ ಇಷ್ಟಾರ್ಥ ಕೊಡುವುದಕೆ
ಕಾಮೆಂಟ್‌ಗಳು