ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಮಾ ಅನಿಲ್


 ಸುಮಾ ಅನಿಲ್ 


ಇಂದು ನಮ್ಮೆಲ್ಲರ ಅಕ್ಕರೆಯ ಸುಮಾ ಅನಿಲ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನೆನಪಾಗುತ್ತಿದ್ದಾರೆ.

ನಮ್ಮ ಸುಮಾ ಅನಿಲ್ ಅವರು ನಿರ್ಮಲ ನಗೆಯ ಸ್ನೇಹ ಜೀವಿ, ಸಮಾಜಮುಖಿ ಮತ್ತು ಕನ್ನಡ ಕಾರ್ಯಕರ್ತೆ. ನನ್ನಲ್ಲಿ ತುಂಬಾ ಆತ್ಮಭಾವ ಮೂಡಿಸಿದ್ದ ಸಹೃದಯಿ.

ಸುಮಾ ಅನಿಲ್ ಅವರ ಪರಿಚಯ ಭಾಗ್ಯ ನನಗೆ ದಕ್ಕಿದ್ದು, ನಾನು ನನ್ನ ಪ್ರೀತಿಯ ಅಕ್ಕನ ಬಗ್ಗೆ ಬರೆದಾಗ ಅವರು, ನನ್ನಲ್ಲಿದ್ದ ನನ್ನಕ್ಕನ ಭಾವವನ್ನೇ, ನನ್ನಕ್ಕನ ಶಿಷ್ಯೆ ಎಂದು ಹೇಳಿಕೊಂಡು ತೋರಿದ ಅಂತರಂಗ ತುಂಬಿದ ಅನುಭೂತಿಯಿಂದ.  ಒಂದು ರೀತಿಯಲ್ಲಿ ನನ್ನಕ್ಕನ ಪ್ರೀತಿಯನ್ನೇ, ಎಂದೂ ನೇರವಾಗಿ ಕಾಣದಿದ್ದ ಈ ತಂಗಿಯ ಸಂವಹನದಲ್ಲಿ ಕಂಡಿದ್ದೆ.

ಸುಮಾ ಅನಿಲ್ ಒಂದು ಎನ್‍ಜಿಓಗೆ ಕೆಲಸ ಮಾಡುತ್ತಿದ್ದರು.  ಸರಕಾರಿ ಶಾಲೆಗಳ ಸಹಾಯದಿಂದ ವಿಶೇಷ ಚೇತನ ಮಕ್ಕಳನ್ನು ಮುಖ್ಯ ವಾಹಿನಿಗೆ ಸಿದ್ಧ ಮಾಡುತ್ತಿದ್ದರು.  ಪ್ರಮುಖವಾಗಿ, ಆರ್ಥಿಕವಾಗಿ ಹಿಂದುಳಿದ ಮಕ್ಕಳು ಮತ್ತು ಗ್ರಾಮೀಣ ಭಾಗದ ಮಕ್ಕಳು ಇವರು ಕಾರ್ಯಕ್ಷೇತ್ರದ ಕಾಳಜಿಗಳಲ್ಲಿದ್ದರು.  ಅದರ ಜೊತೆಗೆ ಇವರು  www.kannadagottilla.com ತಂಡದ ಜೊತೆ ಸೇರಿ ಕನ್ನಡೇತರರಿಗೆ ಕನ್ನಡ ಕಲಿಸುತ್ತಿದ್ದರು.

ಸುಮಾ ಅವರ ಸುಮಸುಂದರ ನಿರ್ಮಲ ನಗೆ ಕಂಡಾಗ ಅನಿಸುತ್ತಿತ್ತು "ತನ್ನ ಬಗ್ಗೆ ಚಿಂತಿಸದೆ ಲೋಕದ ಹಿತಚಿಂತನೆ ಮಾಡುವವರಿಗೆ ಮಾತ್ರವೇ ಇದು ಸಾಧ್ಯ" ಎಂದು.  

ಆತ್ಮೀಯರಾದ, ನನ್ನ ಸಹೋದರಿ ಎಂಬ ಭಾವ ತುಂಬಿಸಿದ್ದ ಸಹೃದಯಿ ಸುಮಾ ಈ ಲೋಕದಲ್ಲಿ ನಮ್ಮ ಜೊತೆ ಇಲ್ಲ ಅಂದರೆ ನಂಬಲಾಗುತ್ತಿಲ್ಲ. 

I miss you ನನ್ನಕ್ಕರೆಯ ಮುದ್ದು ತಂಗಿ ಸುಮಾ ❤️ ನೀನೆಲ್ಲಿದ್ದರೂ ನಮ್ಮ ಹೃದಯದಲ್ಲಿ ಶಾಶ್ವತ.

Fond Remembrances on the birth anniversary our affectionate Suma Anil 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ