ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಯಾ ಮೂರ್ತಿ


 ಜಯಾ ಮೂರ್ತಿ 


ಜಯಾ ಮೂರ್ತಿ ಅವರು ಇಟಲಿಯಲ್ಲಿ ನೆಲೆಸಿರುವ ಕನ್ನಡದ ಬಹುಮುಖಿ ಸಾಧಕಿ. 

ಜಯಾ ಮೂರ್ತಿ ಅವರು 1947ರ ಫೆಬ್ರವರಿ 7ರಂದು ಜನಿಸಿದರು. ಮೂಲತಃ ಮೈಸೂರಿನವರಾದ ಇವರು ಮೈಸೂರು, ಮುಂಬೈ ಮತ್ತು ಇಟಲಿಯ ಪೀಸಾ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ನಡೆಸಿದರು.  

ಜಯಾ ಮೂರ್ತಿ ಅವರು ಕಳೆದ 4 ದಶಕಗಳಿಂದ ಇಟಲಿಯ ಪಿಸಾ ನಗರದಲ್ಲಿ ‌ನೆಲೆಸಿದ್ದಾರೆ. ಎಂ.ಎ. ಪದವಿಧರೆಯಾಗಿರುವ ಅವರು, ಗಣಿತಜ್ಞ ರಾಗಿದ್ದ ಪತಿ ದಿ. ಪ್ರೊ. ವೆಂಕಟೇಶ ಮೂರ್ತಿ ಅವರೊಂದಿಗೆ ಇಟಲಿಗೆ ತೆರಳಿದ ಬಳಿಕ ಇಟಾಲಿಯನ್ ಭಾಷೆಯನ್ನು ಕಲಿತು ಅದರಲ್ಲಿ ಲೇಖನಗಳನ್ನೂ ಗ್ರಂಥಗಳನ್ನೂ ಮೂಡಿಸಿದ್ದಾರೆ.   ಆರ್.ಕೆ. ನಾರಾಯಣ್ ಅವರ ಕೃತಿಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿ ಪಿಸಾ ವಿ ವಿ ಯಿಂದ ಮಾಸ್ಟರ್ಸ್ ಪದವಿ ಪಡೆದಿದ್ದಾರೆ. ಕನ್ನಡ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಇಟಲಿಯ ಪತ್ರಿಕೆ ಗಳಲ್ಲಿ ಲೇಖನ ಬರೆದಿರುವುದಲ್ಲದೆ ಹಿಂದೂ ಸಂಸ್ಕೃತಿ, ತಾತ್ವಿಕತೆಯ ಕೆಲವಂಶಗಳನ್ನು ಕುರಿತು ಇಟಾಲಿಯನ್ ಭಾಷೆಯಲ್ಲಿ L'Induismo dalle five del Gange ಕೃತಿಯನ್ನು ರಚಿಸಿದ್ದಾರೆ. ಸುಧಾ ಮೂರ್ತಿ ಅವರ 'ಡಾಲರ್ ಸೊಸೆ',  ಗಾಯತ್ರಿ ಮೂರ್ತಿ ಅವರ 'ಹಂಬಲ' ಮತ್ತು ತ್ರಿವೆಣಿ ಅವರ 'ಶರಪಂಜರ' ಕೃತಿಗಳನ್ನು  ಇಟಾಲಿಯನ್ ಭಾಷೆಗೆ ಅನುವಾದಿಸಿದ್ದಾರೆ.  ಇವರ ಕನ್ನಡದ ಕೃತಿಗಳಲ್ಲಿ ಗಂಗಾತಟದಿಂದ ಹಿಂದುತ್ವ, ಭಾರತೀಯ ಸಸ್ಯಾಹಾರಿ ಅಡುಗೆ ಖಾದ್ಯ, ಹೃತ್ಕಮಲ ಮುಂತಾದವು ಸೇರಿವೆ. ಇದಲ್ಲದೆ ಇವರ ಬರಹಗಳು ನಾಡಿನ ಎಲ್ಲ ನಿಯತಕಾಲಿಕೆಗಳಲ್ಲಿ ಮೂಡಿಬರುತ್ತಿವೆ.

ಹಿರಿಯ ಸಾಧಕಿ ಜಯಾ ಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday to Jaya Murthy 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ