ಎಚ್. ಜಿ. ಜಯಲಕ್ಷ್ಮೀ
ಡಾ. ಎಚ್. ಜಿ. ಜಯಲಕ್ಷ್ಮೀ ಅವರು ವೈದ್ಯರಾಗಿ, ಪ್ರಾಧ್ಯಾಪಕರಾಗಿ, ಬರಹಗಾರ್ತಿಯಾಗಿ, ಸಂಗೀತಾಸಕ್ತರಾಗಿ, ಸಾಮಾಜಿಕ ಕಳಕಳಿಯುಳ್ಳ ಸೇವಾಕರ್ತರಾಗಿ ತಮ್ಮ ಪರಿಶ್ರಮ ನೀಡುತ್ತ ಬಂದಿದ್ದಾರೆ.
ಫೆಬ್ರುವರಿ 24, ಜಯಲಕ್ಷ್ಮೀ ಅವರ ಜನ್ಮದಿನ. ಜಯಲಕ್ಷ್ಮೀ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಯುರ್ವೇದಿಕ್ ಮೆಡಿಸಿನ್ ಅಂಡ್ ರಿಸರ್ಚ್ ಸಂಸ್ಥೆಯಲ್ಲಿ ಪ್ರಾಧ್ಯಾಪನ ನಡೆಸಿದವರು. ಸಂಗೀತದಲ್ಲೂ ಪರಿಶ್ರಮವಿರುವ ಇವರು ಸುಶ್ರಾವ್ಯವಾಗಿ ಹಾಡುತ್ತಾರೆ.
ಜಯಲಕ್ಷ್ಮೀ ಅವರು ಸಾಮಾಜಿಕ ಸಮಾನತೆಯ ಹಿತಚಿಂತನೆ ಮತ್ತು ಆರೋಗ್ಯಕರ ಸಮಾಜದ ಬೆಳವಣಿಗೆಗಳಿಗೆ ಪೂರಕವಾದ ಬರಹ, ಚಳವಳಿ, ಸಮಾಜಸೇವಾ ಕಾರ್ಯಗಳು ಮತ್ತು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಬರೆದಿದ್ದಾರೆ. 'ಸಾಮಾಜಿಕ ಪಿಡಗುಗಳು ವೈಜ್ಞಾನಿಕ ಪರಿಹಾರ' ಅವರ ಪ್ರಕಟಿತ ಕೃತಿಗಳಲ್ಲಿದೆ. ಅವರು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (AIMSS)ಯ ಪದಾಧಿಕಾರಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಆತ್ಮೀಯರಾದ ಡಾ. ಎಚ್. ಜಿ. ಜಯಲಕ್ಷ್ಮೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Dr. Jayalakshmi Holavanahalli🌷🙏
ಕಾಮೆಂಟ್‌ಗಳು