ನಿನ್ನ ಬಾಂದಳದಂತೆ
ನಿನ್ನ ಬಾಂದಳದಂತೆ ನನ್ನ ಮನವಿರಲಿ
ನಿನ್ನ ಸಾಗರದಂತೆ ನನ್ನ ಎದೆಯಿರಲಿ
ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ
ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ
ನಿನ್ನ ಬಲವಿರುವಂತೆ ನನ್ನ ಬಲವಿರಲಿ
ನಿನ್ನ ತಿಳಿವಿರುವಂತೆ ನನ್ನ ತಿಳಿವಿರಲಿ
ನಿನ್ನೊಲ್ಮೆಯಂದದಲಿ ನನ್ನೊಲ್ಮೆಯಿರಲಿ
ನಿನ್ನಾಳವೆನಗಿರಲಿ ನೀನೇ ನನಗಿರಲಿ
ನಿನ್ನಾತ್ಮದಾನಂದ ನನ್ನದಾಗಿರಲಿ
ನಿನ್ನೊಳಿರುವ ಶಾಂತಿ ನನ್ನೆದೆಗೆ ಬರಲಿ
ಸಾಹಿತ್ಯ: ಕುವೆಂಪು
Photo: At Lalbagh, Bengaluru on 21.3.2017
ಕಾಮೆಂಟ್‌ಗಳು