ಶಿವಪ್ರಕಾಶ್ ಕೋಳಿವಾಡ್
ಶಿವಪ್ರಕಾಶ್ ಕೋಳಿವಾಡ್
ಡಾ. ಶಿವಪ್ರಕಾಶ್ ಕೋಳಿವಾಡ್ ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ಸ್ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ.
ಮಾರ್ಚ್ 21, ಶಿವಪ್ರಕಾಶ್ ಅವರ ಜನ್ಮದಿನ. ಇವರು ಶಿವಮೊಗ್ಗದ ಮೂಲದವರು. ಸಾಗರದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಇವರು, ಮುಂದೆ ಮೈಸೂರಿನ ಎಸ್‍ಜೆಸಿಇ ವಿದ್ಯಾಲಯದಲ್ಲಿ ತಾಂತ್ರಿಕ ಪದವಿ ಪಡೆದರು. ಐಐಟಿ ದೆಹಲಿಯಲ್ಲಿ ಐ.ಸರ್ಕ್ಯೂಟ್ಸ್ ಡಿಸೈನ್ ಇಂಜಿನಿಯರಿಂಗ್ ಓದಿ ಎಂ.ಟೆಕ್ ಗಳಿಸಿದ್ದು ಅಲ್ಲದೆ, ಅಣ್ಣಾ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಗಳಿಕೆಯ ವ್ಯಾಸಂಗ ನಡೆಸಿ ಬಹುಮುಖಿ ಜ್ಞಾನಿಗಳಾದರು.
ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ನಲ್ಲಿ ಸುದೀರ್ಘ ಕಾಲದ ವೃತ್ತಿ ಜೀವನ ನಡೆಸಿರುವ ಡಾ. ಶಿವಪ್ರಕಾಶ್ ಕೋಳಿವಾಡ್ ಅವರು, ಆ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ಸ್ ವಿಭಾಗದ ಪ್ರಧಾನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರಿನಲ್ಲಿ ಪ್ರೊಫೆಸರ್ ಎಮಿರಟಸ್ ಆಗಿ ಆಹ್ವಾನಿತರಾಗಿರುವ ಇವರ ಸೇವೆ ಅನೇಕ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೂ ಸಂದಿದೆ.
ಡಾ. ಶಿವಪ್ರಕಾಶ್ ಕೋಳಿವಾಡ್ ಅವರು ಅನೇಕ ತಾಂತ್ರಿಕ ಪ್ರಕಟಣೆಗಳ ಬರೆಹಗಾರರಾಗಿ ಮತ್ತು ಗ್ರಂಥಕರ್ತರಾಗಿಯೂ ಹೆಸರಾಗಿದ್ದಾರೆ. ಮಲ್ಟಿ-ರೇಟ್ ಸಿಗ್ನಲ್ ಪ್ರೋಸೆಸಿಂಗ್, ಡಿಜಿಟಲ್ ಇಮೇಜ್ ಪ್ರೋಸೆಸಿಂಗ್, ಮಲ್ಟಿಮೀಡಿಯಾ ಮುಂತಾದ ಹಲವಾರು ತಂತ್ರಜ್ಞಾನ ಕ್ಷೇತ್ರಗಳಲ್ಲಿನ ವಿಶಿಷ್ಟ ಪರಿಣತಿಗಾಗಿ ಇವರು ಹೆಸರಾಗಿದ್ದಾರೆ.
ದೊಡ್ಡ ಸಾಧನೆ ಮಾಡಿದ್ದರೂ ನಮ್ಮಂತಹವರ ಸಣ್ಣ ಪುಟ್ಟ ಬರೆಹಗಳನ್ನು ಓದಿ ಪ್ರೋತ್ಸಾಹಿಸುವ ದೊಡ್ಡ ಗುಣ ಡಾ. ಶಿವಪ್ರಕಾಶ್ ಕೋಳಿವಾಡ್ ಅವರದ್ದು. ಈ ಹಿರಿಯರಿಗೆ ಆತ್ಮೀಯವಾಗಿ ಹುಟ್ಟುಹಬ್ಬದ ಶುಭಹಾರೈಕೆಗಳನ್ನು ಹೇಳೋಣ. 🌷🙏🌷
Happy birthday Dr. Shivaprakash Koliwad Sir 🌷🙏🌷
ಕಾಮೆಂಟ್‌ಗಳು