ಜಯಗೌರಿ ಭಟ್
ಮಾರ್ಚ್ 17, ಜಯಗೌರಿ ಅವರ ಜನ್ಮದಿನ. ಮೂಲತಃ ಪುತ್ತೂರಿನವರಾದ ಇವರು ಬಿ.ಕಾಮ್ ಪದವಿಯಲ್ಲದೆ ಮಕ್ಕಳ ಮಾನಸಿಕ ಅಭಿವೃದ್ಧಿ, ನ್ಯೂರೊ ಲಿಂಗ್ವಿಸ್ಟಿಕ್ ಪ್ರೋಗ್ರಾಮಿಂಗ್ ಹಾಗೂ, ಆಪ್ತ ಸಮಾಲೋಚನಾ ಕುಶಲತೆಗಳ (Diploma in Counseling skills) ಕುರಿತಾದ ವ್ಯಾಸಂಗಗಳನ್ನು ನಡೆಸಿ ಬೆಂಗಳೂರು ಮತ್ತು ಪುತ್ತೂರುಗಳಲ್ಲಿ ಅಗತ್ಯವಿದ್ದವರಿಗೆ ಆಪ್ತ ಸಮಾಲೋಚನೆ ಸೇವೆಯನ್ನು ನೀಡುತ್ತಿದ್ದಾರೆ. ಅವರ ಒಂದು ಬರೆಹದಲ್ಲಿನ ಈ ಮಾತುಗಳು ಗಮನ ಸೆಳೆಯುತ್ತವೆ: "..... ಗುರುತು ಪರಿಚಯ ಇರೋರು ಮಾತ್ರಾ ಅಲ್ಲ ಅಪರಿಚಿತ ಕ್ಲೈಂಟ್ ಗಳಾದರೂ ಸರಿ, ಭಾವನಾತ್ಮಕ ತೊಂದರೆಯಲ್ಲಿದ್ದರೆ, ವಿಚಾರಿಸಿಕೊಳ್ಳಬೇಕು, ಸಹಾಯಹಸ್ತ ಚಾಚಬೇಕು, ಕೇಳುವ ಕಿವಿ ಒದಗಿಸಬೇಕು ಎಂದು ಹಾತೊರೆದು ಮಾಡುತ್ತೇನೆ....".
ಜಯಗೌರಿ ಅವರ ಮನೋವಿಶ್ಲೇಷಣಾತ್ಮಕ ಚಿಂತನ ಸ್ವರೂಪದ ಬರಹಗಳು ಪತ್ರಿಕೆಗಳಲ್ಲಿ ಮತ್ತು ಅಂತರಜಾಲ ಮಾಧ್ಯಮಗಳಲ್ಲಿ ಮೂಡಿಬರುತ್ತಿವೆ.
ಸಮಾಜದ ಸ್ವಾಸ್ಥ್ಯಕ್ಕಾಗಿ ಸಕಾರಾತ್ಮಕ ಚಿಂತನೆಗಳಿಂದ ಕಾರ್ಯೋನ್ಮುಖರಾಗಿರುವ ಆತ್ಮೀಯರಾದ ಜಯಗೌರಿ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Jayagouri Bhat 🌷🌷🌷
ಕಾಮೆಂಟ್‌ಗಳು