ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್. ಕೆ. ಶ್ಯಾಮಸುಂದರ್


ಎಸ್.ಕೆ. ಶ್ಯಾಮಸುಂದರ್ ನಿಧನ

ಕನ್ನಡ ಡಿಜಿಟಲ್ ಮಾಧ್ಯಮ ಕಂಡ ಅಪ್ರತಿಮ ಪತ್ರಕರ್ತ ಎಸ್.ಕೆ. ಶ್ಯಾಮಸುಂದರ್ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.  ಅವಿವಾಹಿತರಾಗಿದ್ದ ಅವರು ಶಾಮಿ ಎಂದೇ ಜನಪ್ರಿಯರಾಗಿದ್ದರು.

ಕನ್ನಡ ಪತ್ರಿಕೋದ್ಯಮದಲ್ಲಿ ಸುಮಾರು 4  ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಶ್ಯಾಮ್‌ಸುಂದರ್‌ ಅವರು ಡಿಜಿಟಲ್ ಮಾಧ್ಯಮ ಜಗತ್ತಿಗೆ ಹೊಸದೊಂದು ದಿಕ್ಕು ತೋರಿದವರು. ಸಂಯಕ್ತ ಕರ್ನಾಟಕ ಹಾಗೂ ಕನ್ನಡ ಪ್ರಭ ದಿನಪತ್ರಿಕೆಯ ಪುರವಣಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಶಾಮ್ ಅವರು ಕಸ್ತೂರಿ ಮಾಸಿಕ, ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್ ವಿಭಾಗ, ಒನ್ ಇಂಡಿಯಾ ಕನ್ನಡ ಸುದ್ದಿ ಮಾಧ್ಯಮ, ಪಬ್ಲಿಕ್‌ ಟಿವಿ ಮುಂತಾದ ಸಂಸ್ಥೆಗಳಲ್ಲಿ ವ್ಯಾಪಕ ಸೇವೆ ಸಲ್ಲಿಸಿದ್ದರು. ಏಷ್ಯನ್ ಕಾಲೇಜು ಆಫ್ ಬೆಂಗಳೂರಿನಲ್ಲೂ ಅವರು ಕರ್ತವ್ಯ ನಿರ್ವಹಿಸಿದ್ದರು.

ಶ್ಯಾಮ್‌ಸುಂದರ್ ಅವರು 2012-13ರ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.

ಶ್ಯಾಮ್‌ಸುಂದರ್‌ ಅವರು 2009ರಲ್ಲಿ ತೆರೆಕಂಡ ಜಗ್ಗೇಶ್‌ ಅಭಿನಯದ, ನಿರ್ದೇಶಕ ಗುರುಪ್ರಸಾದ್‌ ಅವರ ʼಎದ್ದೇಳು ಮಂಜುನಾಥʼ ಸಿನಿಮಾದಲ್ಲಿ ಬ್ಯಾಂಕ್ ಮ್ಯಾನೇಜರ್ ಪಾತ್ರ ನಿರ್ವಹಿಸಿದ್ದರು.


S K Shyamasundar


ಅನೇಕ ಯುವಪ್ರತಿಭೆಗಳನ್ನು ಪತ್ರಿಕಾಲೋಕದ ಮೂಲಕ ಹುರಿದುಂಬಿಸಿದ ಶಾಮ್ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.


ಅಗಲಿದ ಶಾಮ್ ಎಂಬ ಆಪ್ತ ಚೇತನಕ್ಕೆ ನಲ್ಮೆಯ ವಿದಾಯ. 



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ