ಕಿರಣ್ ಭಟ್
ಕಿರಣ್ ಭಟ್
ಕಿರಣ್ ಭಟ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಲಾವಿದರಾಗಿ ಹೆಸರಾಗಿದ್ದಾರೆ.
ಮೇ 6, ಕಿರಣ್ ಭಟ್ ಅವರ ಜನ್ಮದಿನ. ಮೂಲತಃ ಇವರು ಶಿರಸಿಯವರು. ತಂದೆ ಪಂಡಿತ್ ಕಮಲಾಕರ ಭಟ್ ಅವರು ಆಗ್ರಾ ಘರಾಣಾದ ಹೆಸರಾಂತ ಕಲಾವಿದರು. ತಂದೆಯವರಿಂದ ಶಿಸ್ತುಬದ್ಧವಾಗಿ ಚಿಕ್ಕಂದಿನಿಂದಲೇ ಸಂಗೀತ ಕಲಿತ ಕಿರಣ್ ಅವರು, ಗಾಯನ ಮಾತ್ರವಲ್ಲದೆ, ತಬಲಾ, ಜಲತರಂಗ್ ಮತ್ತು ಹಾರ್ಮೋನಿಯಂ ವಾದನದಲ್ಲೂ ಪರಿಣತಿ ಹೊಂದಿದ್ದಾರೆ. ತಂದೆಯವರಲ್ಲದೆ ಹಲವು ಪ್ರಸಿದ್ಧ ಕಲಾವಿದರಿಂದಲೂ ಹೆಚ್ಚಿನ ಮಾರ್ಗದರ್ಶನ ಪಡೆದಿದ್ದಾರೆ.
ತಮ್ಮ ಶೈಕ್ಷಣಿಕ ವಿದ್ಯಾಭ್ಯಾಸದ ನಂತರ ಬೆಂಗಳೂರಿಗೆ ಬಂದ ಕಿರಣ್ ಭಟ್ ಹಣಕಾಸು ಕ್ಷೇತ್ರದ ವೃತ್ತಿ ಜೀವನದ ಜೊತೆಗೆ ಸಂಗೀತ ಕಾರ್ಯಕ್ರಮಗಳನ್ನೂ ನೀಡಿ ಹೆಸರಾಗಿದ್ದಾರೆ. ಆಸಕ್ತರಿಗೆ ಸಂಗೀತ ಕಲಿಸುತ್ತಿದ್ದಾರೆ.
ಕಿರಣ್ ಭಟ್ ಅವರಿಗೆ ರಾಗಮಿತ್ರ ಪ್ರತಿಷ್ಠಾನದ 'ಸ್ವರ ಕನಕ' ರಾಷ್ಟ್ರೀಯ ಪುರಸ್ಕಾರ ಸೇರಿದಂತೆ ಸಂಗೀತಲೋಕದ ಅನೇಕ ಗೌರವಗಳು ಸಂದಿವೆ.
ಕಿರಣ್ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Kiran Bhat 🌷🌷🌷
ಕಾಮೆಂಟ್‌ಗಳು