ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಸ್ಕಾರ

 


ಸಂಸ್ಕಾರ

“ಮನಸ್ಸನ್ನು ಒಂದು ಕೊಳಕ್ಕೆ ಹೋಲಿಸುವುದಾದರೆ, ಅದರ ಮೇಲೆ ಏಳುವ ಪ್ರತಿಯೊಂದು ಅಲೆಯೂ, ಅದು ಅಡಗಿದ ನಂತರ, ಸಂಪೂರ್ಣವಾಗಿ ನಾಶವಾಗದೆ, ಒಂದು ಕುರುಹನ್ನು ಅದರ ಮೇಲೆ ಬಿಡುತ್ತದೆ,  ಮತ್ತು ಮುಂದೆ ಅದೇ ತರಹದ ಅಲೆಗಳೇಳುವ ಸಂಭವವನ್ನು ಸೂಚಿಸುತ್ತದೆ.  ಮತ್ತೆ ಅಲೆಯನ್ನು ಎಬ್ಬಿಸುವ ಸಾಮರ್ಥ್ಯವುಳ್ಳ ಆ ಕುರುಹಿಗೆ ‘ಸಂಸ್ಕಾರ’ವೆಂದು ಹೆಸರು.  ನಮ್ಮ ದೇಹದ ಪ್ರತಿಯೊಂದು ಚಲನೆಯೂ ಸೇರಿ, ನಾವು ಮಾಡುವ ಪ್ರತಿಯೊಂದು ಕಾರ್ಯವೂ, ನಾವು ಚಿಂತಿಸುವ ಪ್ರತಿಯೊಂದು ಆಲೋಚನೆಯೂ, ಮನಸ್ಸಿನ ಮೇಲೆ ಅಂತಹ ಒಂದು ಕುರುಹನ್ನು ಅಂದರೆ ಮುದ್ರೆಯನ್ನು ಒತ್ತಿಬಿಡುತ್ತದೆ.  ಈ ಕುರುಹು ಬಾಹ್ಯತಃ ವ್ಯಕ್ತವಾಗದಿದ್ದರೂ ಆಂತರಿಕವಾಗಿ ನಮ್ಮ ಪ್ರಜ್ಞೆಗೆ ಬಾರದೆಯೇ ಕೆಲಸ ಮಾಡುತ್ತಿರುತ್ತದೆ.  ಪ್ರತಿಯೊಂದು ಕ್ಷಣದಲ್ಲಿಯೂ ನಾವೇನಾಗಿರುತ್ತೇವೆಯೋ ಅದು ನಮ್ಮ ಮನಸ್ಸಿನ ಮೇಲೆ ಹಿಂದೆ ಅಂಕಿತವಾದ ಒಟ್ಟು ಕುರುಹಗಳ ಅಥವಾ ಸಂಸ್ಕಾರಗಳ ಫಲವೇ ಆಗಿದೆ.”

ಹಾಗಾದರೆ ನಮ್ಮಲ್ಲಿ ಕಂಡುಬರುವ ಹವ್ಯಾಸಗಳಿಗೆ ಪರಿಹಾರವೇನು?  “ಎಲ್ಲಾ ಕೆಟ್ಟ ಅಭ್ಯಾಸಗಳನ್ನೂ ಒಳ್ಳೆಯ ಅಭ್ಯಾಸದ ಬಲದಿಂದ ನಿಗ್ರಹಿಸಬೇಕು.  ಎಡೆಬಿಡದೆ ಒಳ್ಳೆಯದನ್ನು ಮಾಡುತ್ತ ಮಾಡುತ್ತಾ ಹೋಗಿ; ಒಳ್ಳೆಯದನ್ನು ಆಲೋಚಿಸುತ್ತಾ ಇರಿ.  ನಮ್ಮ ಕೀಳು ಸ್ವಭಾವವನ್ನು ಅಡಗಿಸುವುದಕ್ಕೆ ಇದೊಂದೇ ದಾರಿ.  ಯಾರನ್ನೂ ಕೆಟ್ಟವರೆಂದು ಹೇಳಬೇಡಿ.  ಏಕೆಂದರೆ ಅವರು ಕೆಲವು ಅಭ್ಯಾಸಗಳ ಬಲದಿಂದ ಒಂದು ಶೀಲ ಅಥವಾ ಚಾರಿತ್ರ್ಯವನ್ನು ಪಡೆದಿದ್ದಾರೆ.  ಈ ಶೀಲವನ್ನು ನಾವು ಬೇರೆಯ ಉತ್ತಮ ಅಭ್ಯಾಸ ಬಲದಿಂದ ಮಾತ್ರ ತಿದ್ದಬಹುದು.  ಶೀಲವೆಂದರೆ ಮತ್ತೆ ಮತ್ತೆ ಪುನರಾವರ್ತನೆ ಆಗುವ ಅಭ್ಯಾಸ.  ಪುನಃ ಪುನಃ ಅಭ್ಯಾಸದಿಂದ ಮಾತ್ರ ನಮ್ಮ ಶೀಲವನ್ನು ತಿದ್ದಿಕೊಳ್ಳಬಹುದು.”

ಕೃಪೆ: ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿ
Photo: At Jumeira Islands, Dubai


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ