ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಂಧ್ಯಾ ಅಡಿಗ

 

ವಿಂಧ್ಯಾ ಅಡಿಗ

ವಿಂಧ್ಯಾ ಅಡಿಗ ನನ್ನ ಗಮನ ಸೆಳೆದದ್ದು ಅವರು ತಮ್ಮ ವಿಶಿಷ್ಟ ಧ್ವನಿಯಿಂದ ಹೊರಹೊಮ್ಮಿಸಿದ ಕಥೆ ಹೇಳುವಿಕೆಯಿಂದ.  ಅವರೊಬ್ಬ ವಿಶಿಷ್ಟ ನಿರೂಪಕಿ.  ಸಂಗೀತ, ಸಾಹಿತ್ಯ, ಸಂಸ್ಕೃತಿ, ಯೋಗ, ಅಧ್ಯಾತ್ಮ, ಚಾರಣ, ಪರ್ವತಾರೋಹಣ, ಪ್ರವಾಸ, ಪ್ರಕೃತಿ ಪ್ರೀತಿ ಹೀಗೆ ಅವರ ಸದಭಿರುಚಿಗಳು ಅನೇಕ.  ತಮ್ಮ ಸಾಂಸ್ಕೃತಿಕ ಆಸಕ್ತಿಗಳ ಅರಸುವಿಕೆಗಾಗಿ ತಮ್ಮ ಸಾಫ್ಟ್ವೇರ್ ಉದ್ಯೋಗದ ನೆಲೆಯನ್ನೂ ಸಧ್ಯಕ್ಕೆ ಪಕ್ಕಕ್ಕಿರಿಸಿರುವ ಧೀಮಂತೆ ಈಕೆ.

ವಿಂಧ್ಯಾ ಸಾಂಸ್ಕೃತಿಕ, ಸಂಗೀತ, ನೃತ್ಯ ಹಾಗೂ ಕಾರ್ಪೋರೇಟ್ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಹೋದಲ್ಲೆಲ್ಲ ಮೆಚ್ಚುಗೆಗಳನ್ನು ಗಳಿಸಿದ್ದಾರೆ.

ತಮ್ಮ ಆಸಕ್ತಿಯ ಪಯಣವನ್ನೆಲ್ಲ ಇನ್ನೂ ಪ್ರಾರಂಭದ್ದು ಎನ್ನುವ ವಿನಯಶೀಲತೆ, ಸಾಂದರ್ಭಿಕವಾದ ಅಗತ್ಯತೆಗಳನ್ನು ನಿಭಾಯಿಸುತ್ತೇನೆ ಎನ್ನುವ ಆತ್ಮವಿಶ್ವಾಸ, ಕಾರ್ಯಕ್ರಮ ಆಯೋಜಿಸುವವರಿಗೆ ನಿಮ್ಮೊಂದಿಗಿದ್ದೇನೆ ಎನ್ನುವ ಹಸನ್ಮುಖದ ಭರವಸೆ ಇವೆಲ್ಲ ವಿಂಧ್ಯಾ ಅವರು ಕ್ರಮಿಸುತ್ತಿರುವ ವಿಂಧ್ಯತುಂಗದೆಡೆಗಿನ ಹಾದಿಗೆ ಬೆಳಕು ಚೆಲ್ಲುತ್ತಿವೆ.

ಆತ್ಮೀಯ ಹಸನ್ಮುಖಿ ಯುವ ಪ್ರತಿಭಾನ್ವಿತ ಗೆಳತಿ ವಿಂಧ್ಯಾಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.

Happy birthday Vindhya Adiga 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ