ವಿಪರ್ಯಾಸ
ವಿಪರ್ಯಾಸ!
ಎಂಥಾ ಮಧುರಭಾವದ ಮಂದಹಾಸ ಅನಿಸುತ್ತೆ!
ಹೂವು ಸುಂದರವಾಗಿರುತ್ತೆ.
ಆದರೆ ಮುಳ್ಳಿನ ನಡುವೆ ಇರುತ್ತೆ.
ಬೇಗ ಉದುರಿಯೂ ಹೋಗುತ್ತೆ.
ಕೆಲವೊಂದು ಸುಂದರ ಜೀವಗಳೂ ಅಷ್ಟೇ!
ಕಾಣುವ ಕಂಗಳು ಆರಾಧಿಸುತ್ತವೆ.
ಸುಂದರವಾದವುಗಳಿಗಿರುವ ನೋವು
ಅರಿಯದಾಗಿರುತ್ತೆ.
ನಮ್ಮೊಳಗಿರುವ ಆನಂದ ಕಾಣದಿರುತ್ತೆ.
ಇನ್ನೆಲ್ಲೋ ಇದೆ ಎಂದು ಮೋಹಪರವಶವಾಗಿರುತ್ತೆ.
ಸೌಂದರ್ಯವನ್ನು ಕಾಣೊ ಕಣ್ಣು
ದುಃಖವನ್ನು ಕಾಣೊ ಆಂತರ್ಯವನ್ನು ಕಳೆದುಕೊಂಡಿರುತ್ತೆ.
ಸಂತೋಷವನ್ನು ಹುಡುಕುವ ಮನಸ್ಸು
ಸದಾ ಆನಂದದಿಂದ ಹೊರಗೇ ಅಲೆಮಾರಿಯಾಗಿರುತ್ತೆ!
ಕಾಮೆಂಟ್‌ಗಳು