ರಾಜೇಶ್ ಕೃಷ್ಣನ್
ರಾಜೇಶ್ ಕೃಷ್ಣನ್
ಚಲನಚಿತ್ರ ಹಿನ್ನೆಲೆಗಾಯನಕ್ಕೆ ರಾಜೇಶ್ ಕೃಷ್ಣನ್ ಕನ್ನಡ ನಾಡಿನ ಭವ್ಯ ಕೊಡುಗೆ.
ರಾಜೇಶ್ ಕೃಷ್ಣನ್ 1973ರ ಜೂನ್ 3ರಂದು ಜನಿಸಿದರು. ತಂದೆ ರಂಗನಾಥನ್. ತಾಯಿ ಮೀರಾ ಕೃಷ್ಣನ್. ಇವರ ಬಾಲ್ಯ ಮತ್ತು
ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ನಡೆಯಿತು. ರಾಜೇಶ್ ಚಿಕ್ಕ ವಯಸಿನಿಂದಲೇ ತಮ್ಮ ತಾಯಿಯವರ ಬಳಿಯಲ್ಲಿ ಸಂಗೀತವನ್ನು ಕಲಿತರು.
ರಾಜೇಶ್ ಕೃಷ್ಣನ್ 1991 ರಲ್ಲಿ ತೆರೆಕಂಡ 'ಗೌರಿ ಗಣೇಶ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕರಾಗಿ ಹೊರ ಹೊಮ್ಮಿದರು. ಮುಂದೆ ಕನ್ನಡ ಭಾಷೆಯಲ್ಲದೆ ಇತರ ಭಾಷಾ ಚಿತ್ರಗಳಲ್ಲೂ ಹಾಡಿ ತಮ್ಮ ಸುಶ್ರಾವ್ಯ ಗಾಯನಕ್ಕೆ ಎಲ್ಲೆಡೆ ಹೆಸರಾಗಿದ್ದಾರೆ. ಸ್ಫುರದ್ರೂಪಿಯೂ ಆದ ಇವರು ತೆರೆಯ ಮೇಲೆ ನಟನೆಯಲ್ಲೂ ಕಾಣಿಸಿಕೊಂಡಿದ್ದಾರಲ್ಲದೆ ಅನೇಕ ರಿಯಾಲಿಟಿ ಶೋ ಮತ್ತು ವೇದಿಕೆಗಳಲ್ಲಿ ತೀರ್ಪುಗಾರರಾಗಿ ಶೋಭಿಸಿದ್ದಾರೆ.
ರಾಜೇಶ್ ಕೃಷ್ಣನ್ ಅವರ ಪ್ರಖ್ಯಾತ ಗೀತೆಗಳಲ್ಲಿ. ಸುಮ್ ಸುಮ್ನೇ ನಗ್ತಾಳೆ, ಉಸಿರೆ ಉಸಿರೆ, ನೂರು ಜನ್ಮಕು ನೂರಾರು ಜನ್ಮಕು, ಕರಿಯಾ ಐ ಲವ್ ಯು, ಒಂದೊಂದೇ ಬಚ್ಚಿಟ್ಟ ಮಾತು, ಪ್ರೇಮ ಚಂದ್ರಮ ಕೈಗೆ ಸಿಗುವುದೆ, ಒಂದೇ ಉಸಿರಂತೆ ಇನ್ನು ನಾನು ನೀನು, ಸೊಬಗನು ನಾಚಿಸೊ ಹುಡುಗಿಗೆ ಮುಂತಾದವು ನೆನಪಾಗುತ್ತವೆ.
ರಾಜೇಶ್ ಕೃಷ್ಣನ್ ಅವರಿಗೆ ಹಲವು ಬಾರಿ ಶ್ರೇಷ್ಠ ಹಿನ್ನೆಲೆ ಗಾಯಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಆಂಧ್ರ ಪ್ರದೇಶ ಸರ್ಕಾರದ ನಂದಿ ಪ್ರಶಸ್ತಿ ಮತ್ತು ಅನೇಕ ಪ್ರಖ್ಯಾತ ಚಲನಚಿತ್ರ ಮಾಧ್ಯಮ ಚಿತ್ರಪ್ರಶಸ್ತಿಗಳು ಸಂದಿವೆ.
Lovely voice in playback singing Rajesh Krishnan
ಕಾಮೆಂಟ್‌ಗಳು