ಮೈಸೂರು ಎಂ. ಗುರುರಾಜ್
ಮೈಸೂರು ಎಂ. ಗುರುರಾಜ್
ವಿದ್ವಾನ್ ಮೈಸೂರು ಎಂ. ಗುರುರಾಜ್ ಅವರು ಮೋರ್ಚಿಂಗ್ ಮತ್ತು ಮೃದಂಗ ವಾದನ ಕಲಾವಿದರಾಗಿ ಪ್ರಖ್ಯಾತರಾಗಿದ್ದಾರೆ.
ಜೂನ್ 13, ಗುರುರಾಜ್ ಅವರ ಜನ್ಮದಿನ. ಇವರದ್ದು ಪ್ರಸಿದ್ಧ ಸಂಗೀತ ಕುಟುಂಬ. ಇವರ ತಾತ ವಿದ್ವಾನ್ ಎಂ. ರಾಘವೇಂದ್ರ ಆಚಾರ್ ಅವರು ಪ್ರಸಿದ್ಧ ಪಿಟೀಲು ವಾದನ ಕಲಾವಿದರಾಗಿ ಹಾಗೂ 1920 ದಶಕದಲ್ಲಿ ಮದರಾಸಿನ ಕ್ವೀನ್ಸ್ ಮೇರಿ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಪ್ರಸಿದ್ಧರಾಗಿದ್ದರು. ಗುರುರಾಜ್ ಅವರ ತಂದೆ ವಿದ್ವಾನ್ ಎಂ. ವೆಂಕಟೇಶ ಆಚಾರ್ ಮತ್ತು ಇವರ ಚಿಕ್ಕಪ್ಪ ಎಂ. ಶೇಷಗಿರಿ ಆಚಾರ್ ಬಳ್ಳಾರಿ ಸಹೋದರರೆಂಬ ಹೆಸರಿನಿಂದ ಸಂಗೀತ ಲೋಕದಲ್ಲಿ ಪ್ರಖ್ಯಾತರು.
ಗುರುರಾಜ್ ಅವರು ಮಹಾನ್ ಮೃದಂಗ ಕಲಾವಿದ ಟಿ. ಎ. ಎಸ್ ಮಣಿ ಅವರ ಶಿಷ್ಯರಾಗಿ ಎರಡು ದಶಕಗಳ ಕಾಲ ತಾಳ ವಾದ್ಯ ಕಲೆಯನ್ನು ನಿಷ್ಠೆಯಿಂದ ಅಭ್ಯಾಸ ಮಾಡಿದರು. ಈ ವ್ಯಾಸಂಗದಲ್ಲಿ ಮೃದಂಗ ವಾದನ ಕಲೆಯನ್ನಲ್ಲದೆ, ಅದೇ ಪಾಠಗಳನ್ನು ಮೋರ್ಚಿಂಗ್ ವಾದನದಲ್ಲಿ ಅಳವಡಿಸಿಕೊಳ್ಳುವಲ್ಲಿ ಅಪಾರ ಸಾಧನೆ ಮಾಡಿದರು.
ವಿದ್ವಾನ್ ಗುರುರಾಜ್ ಅವರು ಆಕಾಶವಾಣಿಯ 'ಎ' ದರ್ಜೆಯ ಕಲಾವಿದರಾಗಿದ್ದು ಆಕಾಶವಾಣಿ, ದೂರದರ್ಶನಗಳಲ್ಲಿ ನಿರಂತರವಾಗಿ ಕಾರ್ಯಕ್ರಮ ನೀಡಿದ್ದಾರೆ. ಭಾರತ ಮತ್ತು ವಿದೇಶಗಳ ಪ್ರಸಿದ್ಧ ವೇದಿಕೆಗಳಲ್ಲಿ ಬಹುತೇಕ ಶ್ರೇಷ್ಠ ಕಲಾವಿದರಿಗೆ ಸಹವಾದನ ನೀಡಿ ಪ್ರಖ್ಯಾತರಾಗಿದ್ದಾರೆ. ಗುರುವಾಗಿ ಅನೇಕ ಪ್ರಖ್ಯಾತ ಶಿಷ್ಯರಿಗೆ ಮಾರ್ಗದರ್ಶನ ಮಾಡಿದ್ದಾರೆ
ವಿದ್ವಾನ್ ಗುರುರಾಜ್ ಅವರಿಗೆ ಕರ್ನಾಟಕ ಕಲಾಶ್ರೀ ಗೌರವ, ಬೆಂಗಳೂರು ಗಾಯನ ಸಮಾಜ ಪ್ರಶಸ್ತಿ ಮತ್ತು ಕರ್ನಾಟಕ ಗಾನ ಕಲಾ ಪರಿಷತ್ ಗೌರವವೂ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಸಾಧಕರಾದ ವಿದ್ವಾನ್ ಗುರುರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Vidwan Morching Gururaj Sir 🌷🌷🌷
ಕಾಮೆಂಟ್‌ಗಳು