ಭಾಗ್ಯಜ್ಯೋತಿ ಹಿರೇಮಠ
ಭಾಗ್ಯಜ್ಯೋತಿ ಗುಡಗೇರಿ
ಭಾಗ್ಯಜ್ಯೋತಿ ಹಿರೇಮಠ ಅವರು ಕವಯತ್ರಿಯಾಗಿ ಹೆಸರಾಗಿದ್ದಾರೆ
ಜೂನ್ 14, ಭಾಗ್ಯಜ್ಯೋತಿ ಅವರ ಜನ್ಮದಿನ. ಇವರು ಧಾರವಾಡದ ಗುಡಗೇರಿಯ ಮೂಲದವರು. ಎಂ.ಎ., ಎಂ.ಇಡಿ ಪದವಿ ಗಳಿಸಿರುವ ಇವರು ಹುಬ್ಬಳ್ಳಿಯ ಕೆ.ಎಲ್.ಇ ಸಂಸ್ಥೆಯ ಪಿ.ಸಿ.ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದಾರೆ. ಹಂಪಿ ಕನ್ಮಡ ವಿಶ್ವವಿದ್ಯಾಲಯದಲ್ಲಿ ʻಕನ್ನಡ ಸಿನಿಮಾ ಹಾಡುಗಳ ಗೀತಮೀಮಾಂಸೆʼ ಎ೦ಬ ಇವರ ಮಹಾಪ್ರಬಂಧವು ಪಿಎಚ್.ಡಿ ಗೌರವಕ್ಕೆ ಅಂಗೀಕೃತಗೊಂಡಿದೆ.
ಭಾಗ್ಯಜ್ಯೋತಿ ಅವರು 'ಕನ್ನಡ ಚಲನಚಿತ್ರ ರ೦ಗಕ್ಕೆ ನರಸಿಂಹರಾಜು ಅವರ ಕೊಡುಗೆ' ಎ೦ಬ ವಿಷಯದ ಮೇಲೆ ನಡೆದ ರಾಜ್ಯ ಮಟ್ಟದ ಪ್ರಬ೦ಧ ಸ್ಪರ್ಧೆಯಲ್ಲಿ ಪ್ರಥಮ ಸ್ಕಾನ ಪಡೆದವರು. ಹುಬ್ಬಳ್ಳಿಯ ಕೆ.ಎಲ್.ಇ ಧ್ವನಿ ಎಫ್.ಎ೦. ಕೇ೦ದ್ರದಲ್ಲಿ ನಿರಂತರವಾಗಿ ಅನೇಕ ವಿಶಿಷ್ಟವಾದ ಕಾರ್ಯಕ್ರಮಗಳಿಗೆ ಧ್ವನಿಯಾಗಿದ್ದಾರೆ. ಅನೇಕ ಪ್ರತಿಷ್ಟಿತ ವೇದಿಕೆಗಳಲ್ಲಿ ಕವನ ವಾಚಿಸಿದ್ದಾರೆ.
ಭಾಗ್ಯಜ್ಯೋತಿ ಅವರ ಮೊದಲ ಕವನ ಸ೦ಕಲನ 'ಪಾದಗ೦ಧ' ಕೃತಿ ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದ ಧನಸಹಾಯ ಗೌರವ ಗಳಿಸಿತು. ಇವರ ಕವಿತೆಗಳಿಗೆ 2018ರ ಸಂಕ್ರಮಣ ಕಾವ್ಯ ಬಹುಮಾನ, ಕನ್ನಡ ಸಾಹಿತ್ಯ ಹರಿಷತ್ತು ಕೊಡಮಾಡುವ ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ, ಹಾಸನದ ಕಾವ್ಯ ಮಾಣಿಕ್ಯ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಮಧುರಚೆನ್ನ ದತ್ತಿ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ಭಾಗ್ಯಜ್ಯೋತಿ ಅವರ ಎರಡನೇ ಕವಿತಾ ಸಂಕಲನ 'ಬಿದಿರ ಬಿನ್ನಹ'. ಇದು
2022 ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಗಳಿಸಿದೆ. ಭಾಗ್ಯಜ್ಯೋತಿ ಅವರ ಬಹುಮುಖಿ ಬರಹಗಳು ಎಲ್ಲ ನಿಯತಕಾಲಿಕಗಳಲ್ಲಿ ಪ್ರಕಾಶಿಸುತ್ತಿದ್ದು ಅನೇಕ ಬಹುಮಾನಗಳನ್ನು ಗಳಿಸಿವೆ. ತ್ರಿವೇಣಿ ಶೆಲ್ಲಿಕೇರಿ ಪ್ರಶಸ್ತಿ ಹಾಗೂ ಅನೇಕ ಸಂಘ ಸಂಸ್ಥೆಗಳ ಗೌರವಗಳು ಅವರಿಗೆ ಸಂದಿವೆ.
ಭಾಗ್ಯಜ್ಯೋತಿ ಹಿರೇಮಠ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Bhagyajyoti Hiremath
ಕಾಮೆಂಟ್‌ಗಳು