ಚುಂಬನ ದಿನ
ಚುಂಬನ ದಿನ
ಚುಂಬನ ಎಂಬುವ ಮಧುರಾನುಭೂತಿ, ಆರೋಗ್ಯವಂತ ಮನಗಳಿಗೆ ಇಷ್ಟವಾಗುವಂತದ್ದು. ಚುಂಬನ ಎಂಬುವ ಭಾವ, ಮಡಿವಂತಿಕೆಯ ಚಿಂತನಗಳಲ್ಲಿ ಸಾಕಷ್ಟು ನಲುಗಿದೆಯಾದರೂ ಅದಕ್ಕೆ ಸಮೀಪವಾದ, ಮುತ್ತು ಕೊಡುವ ಭಾವವಂತೂ ಹಿರಿಯ ಕಿರಿಯ ವಯೋಮಿತಿಗಳನ್ನು ಬೆಸೆಯುವ ಒಂದು ಅಮೂಲ್ಯ ಬಂಧವಾಗಿ ಎಲ್ಲ ಸಮಾಜಗಳಲ್ಲೂ ಜೀವಂತವಾಗಿದೆ.
ಪ್ರೇಮಸೂಚಕ ಎಂಬ ಹಿನ್ನೆಲೆಯಲ್ಲಿನ ಚುಂಬನದ ಭಾವವಂತೂ ಕಾವ್ಯಾತ್ಮಕವಾಗಿ ಸದಾ ಆಕರ್ಷಣೀಯ. ಈ ನಿಟ್ಟಿನಲ್ಲಿ ನನಗೆ ನೆನಪಿರುವ ಕೆಲವು ಚುಂಬಕ ಭಾವಗಳು ಇಂತಿವೆ:
ಹೂವು ಹಾಸಿಗೆ ಚಂದ್ರ ಚಂದನ,
ಬಾಹು ಬಂಧನ, ಚುಂಬನ;
ಬಯಕೆ ತೋಟದ ಬೇಲಿಯೊಳಗೆ
ಕರಣಗಳದೀ ರಿಂಗಣ;
- ಗೋಪಾಲ ಕೃಷ್ಣ ಅಡಿಗರು
---
ಸಾಗರಕೆ ಚಂದಿರ ತಂದ ಪ್ರಥಮ ಚುಂಬನ
- ಆರ್. ಎನ್. ಜಯಗೋಪಾಲ್ ಅವರ 'ಒಂದು ಹೆಣ್ಣಿನ ಕಥೆ' ಚಿತ್ರದ ಗೀತೆ
--
ಹೂಗಳು ದುಂಬಿಯ ಚುಂಬನದಿಂದ
ಪುಳಕಿತವಾಗಿಹ ಕಾಲ
ಮಧುಮಯ ಯೌವನ ಮೈ ಮನ ತುಂಬಿ
ಮೆರೆದಿಹ ವಸಂತ ಕಾಲ
ಸಾಹಿತ್ಯ: ಗೀತಪ್ರಿಯ ಅವರ 'ಬೆಸುಗೆ' ಚಿತ್ರದ ಗೀತೆ
---
ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ,
ಅಧರಚುಂಬನದಿಂದೆ ಸವಿಯದನು ಬಾ.
ಚಂಚಲತೆ ಏಕೆ, ಓ ಚಂಚರೀಕವೆ, ನಿನಗೆ?
ವಂಚನೆಯದಿನಿತಿಲ್ಲ; ಬಾ, ಬೇಗ ಬಾ!
ಕುವೆಂಪು
--
ಬಿಂಬಾಧರವು ಡೊಂಕು, ಚುಂಬನವು ಡೊಂಕೆ
ರಸಿಕಾ ಪೇಳೋ!
ಅಂಬಿಕಾತನಯ ದತ್ತ
--
ಆತ ಕೊಟ್ಟ ವಸ್ತು ವಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳ ಬಂದಿ
ಕೆನ್ನೆ ತುಂಬ ಮುತ್ತು.
- ಅಂಬಿಕಾತನಯ ದತ್ತ
---
ಬಾರೆನ್ನ ಮನದನ್ನೆ ಬರಲಿ ಹತ್ತಿರ ಕೆನ್ನೆ
ಮುತ್ತಿನಲಿ ಒಂದಾಗಲೆರಡು ಜೀವ
ಬಾಳಿನೇರಿಳಿತಗಳ ಮುಗಿದಿರದ ಪಯಣಕ್ಕೆ
ಶುಭವ ಕೋರಲಿ ಸುಳಿದು ಧನ್ಯಭಾವ
- ಕೆ. ಎಸ್. ನರಸಿಂಹಸ್ವಾಮಿ
---
ಲಲಿತಶೃಂಗಾರ ರಸಪೂರ್ಣೆ ಚಂದಿರವರ್ಣೆ
ದೃಷ್ಟಿ ತೆಗೆಯಲು ಒಂದು ಮುತ್ತನಿಡುವೆ
ನಿನ್ನ ಸಕ್ಕರೆ ನಿದ್ದೆ ಸವಿಗನಸ ಕಥೆ ಹೇಳು
ಒಂದು ಚಣ ಜಗವನ್ನೇ ಮರೆತುಬಿಡುವೆ
– ಚನ್ನವೀರ ಕಣವಿ
---
ಮಾತು ಬರುವುದು ಎಂದು ಮಾತಾಡುವುದು ಬೇಡ;
ಒಂದು ಮಾತಿಗೆ ಎರಡು ಅರ್ಥವುಂಟು.
ಎದುರಿಗಿರುವವ ಕೂಡ ಮಾತ ಬಲ್ಲವ ಗೆಳೆಯ;
ಬರಿದೆ ಆಡುವ ಮಾತಿಗರ್ಥವಿಲ್ಲ.
ಕಡಲ ತಟಿಯಲಿ ತರುಣ ಬಲೆಯ ಬೀಸಿದ್ದಾನೆ;
ಮೀನು ಬೀಳುವ ತನಕ ಕಾಯ ಬೇಕು.
ಮೀನ ಹೊರೆಯನು ಹೊತ್ತು ಮನೆಗೆ ಬಂದಿದ್ದಾನೆ;
ಹುಡುಕುತ್ತಲಿಹನವನು ಮುತ್ತಿಗಾಗಿ.
ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು.
ಮೀನಿನಿಂದಲು ನಮಗೆ ಲಾಭವುಂಟು.
ಮುತ್ತ ಹುಡುಕಲು ಹೋಗಿ ಮೀನತಂದಿದ್ದಾನೆ.
ಅವನ ದುಡಿಮೆಗೆ ಕೂಡ ಅರ್ಥವುಂಟು.
ಮನೆಗೆ ಬಂದಾಗವನ ಮಡದಿ ಮೆಲ್ಲನೆ ನಕ್ಕು
ಮುತ್ತಕೊಟ್ಟಳು ಅವನ ಹಸಿದ ತುಟಿಗೆ.
ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.
ಮುತ್ತು ಸಿಕ್ಕಿತು ಎಂದು ನಕ್ಕನವನು.
ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ
--
ಇನ್ನು ಪಾಶ್ಚಾತ್ಯ ಚಿಂತನೆಯಲ್ಲಂತೂ ಚುಂಬನವಿಲ್ಲದ ಸಾಹಿತ್ಯವಿಲ್ಲ, ನಾಟಕಗಳಿಲ್ಲ, ಸಿನಿಮಾಗಳಿಲ್ಲ. ಬಹುಶಃ ಅವರಿಗೆ ಅದಿಲ್ಲದ ಬದುಕೂ ಇಲ್ಲವೇನೊ! ಗೊತ್ತಿಲ್ಲ.
ನಾನು ಸುಮಾರು 45 ವರ್ಷಗಳ ಹಿಂದೆ ಕಸ್ತೂರಿ ಮಾಸ ಪತ್ರಿಕೆಯಲ್ಲಿ ಓದಿದ ಒಂದು ಸೂಕ್ತಿ ಮರೆಯಲಾಗದ್ದು. ಅದರಲ್ಲಿರುವ ಹಾಸ್ಯ ಮತ್ತು ಗಂಭೀರತೆಗಳೆರಡೂ ಇಂದಿಗೂ ನನ್ನ
ಮನದಲ್ಲುಳಿದಿದೆ:. "ಬಹಳ ಪರುಷರು ತಮ್ಮ ಮನದನ್ನೆಯನ್ನು ಚುಂಬಿಸುವುದೇ ಇಲ್ಲ, ಇತರರು ಹಾಗೆ ಮಾಡುವುದನ್ನು ಸಹಿಸುವುದೂ ಇಲ್ಲ!".
ನನ್ನ ಗಮನಕ್ಕೆ ಬಂದ ಕೆಲವು ಆಂಗ್ಲ
ಸೂಕ್ತಿಗಳಿವು:
Let the rain kiss you. Let the rain beat upon your head with silver liquid drops. Let the rain sing you a lullaby.
- Langston Hughes
—-
Any man who can drive safely while kissing a pretty girl is simply not giving the kiss the attention it deserves.
- Albert Einstein
—-
Life is short but love your loved ones. Love them, kiss them every day because you don't know what's going to happen.
- Angelina Pivarnick
—-
A kiss is a lovely trick designed by nature to stop speech when words become superfluous.
- Ingrid Bergman
—
Happiness is like a kiss. You must share it to enjoy it.
- Bernard Meltzer
—-
Always kiss your children goodnight, even if they're already asleep.
- H. Jackson Brown, Jr.
—-
A man's kiss is his signature.
- Mae West
—-
Hollywood is a place where they'll pay you a thousand dollars for a kiss and fifty cents for your soul.
- Marilyn Monroe
—-
A kiss makes the heart young again and wipes out the years.
- Rupert Brooke
—-
The decision to kiss for the first time is the most crucial in any love story. It changes the relationship of two people much more strongly than even the final surrender; because this kiss already has within it that surrender.
- Emil Ludwig
—-
Though I know he loves me, tonight my heart is sad; his kiss was not so wonderful as all the dreams I had.
- Sara Teasdale
ನಮ್ಮ ಜವಾಬ್ದಾರಿಯುತ ವಲಯದಲ್ಲಿರುವವರಿಗೆ ಪ್ರೀತಿಯ ಅಭಿವ್ಯಕ್ತಿಯನ್ನು ನೀಡುವುದನ್ನು ಮರೆಯದಿರೋಣ. ಒತ್ತಾಯವಿಲ್ಲದ ಶುಭ್ರ ಪಾರಸ್ಪರಿಕ ಪ್ರೀತಿಗೆ ಮಿಗಿಲಾದ ಸ್ವರ್ಗ ಮತ್ತೊಂದಿಲ್ಲ. ಈ ಚುಂಬಕ ಶಕ್ತಿ ನಮ್ಮ ಎಲ್ಲ ಕಾಯಿಲೆಗಳನ್ನೂ ಬಡಿದೋಡಿಸಿ ನಮ್ಮ ಆರೋಗ್ಯವನ್ನು ಕಾಪಾಡುವ ಸಂಜೀವಿನಿ.
On World Kissing Day
ಕಾಮೆಂಟ್‌ಗಳು