ಕೆ. ನಿರ್ಮಲ
ಕೆ. ನಿರ್ಮಲ
ಕೆ. ನಿರ್ಮಲ ಮರಡಿಹಳ್ಳಿ ಅವರು ಬಹುಮುಖಿ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ.
ಜುಲೈ 28, ನಿರ್ಮಲ ಅವರ ಜನ್ಮದಿನ. ಮೂಲತಃ ಶಿವಮೊಗ್ಗದವರಾದ ಇವರು ಪ್ರಸಕ್ತ ಕುಟುಂಬದೊಡನೆ ಚಿತ್ರದುರ್ಗದಲ್ಲಿ ನೆಲೆಸಿದ್ದಾರೆ. ಇವರು ಎಂ.ಎ., ಬಿ.ಇಡಿ ಓದಿ ಪ್ರೌಢಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಇತ್ತೀಚಿನ ವರ್ಷಗಳಿಂದ ಐಚ್ಛಿಕ ನಿವೃತ್ತಿ ಪಡೆದಿದ್ದಾರೆ.
ಸಾಹಿತ್ಯ ಪ್ರಿಯರಾದ ನಿರ್ಮಲ ಅವರಿಗೆ ಸಂಗೀತದಲ್ಲೂ ಪರಿಶ್ರಮವಿದೆ. ಅವರ ಬರಹಗಳು ನಿರಂತರ ಎಲ್ಲ ನಿಯತಕಾಲಿಕಗಳಲ್ಲಿ ಕಂಗೊಳಿಸಿವೆ.
ನಿರ್ಮಲ ಅವರ ಪ್ರಕಟಿತ ಕೃತಿಗಳಲ್ಲಿ 'ನೀ', 'ಕಾನನದ ಒಡಲು' ಎಂಬ ಕವನ ಸಂಕಲನಗಳು; 'ವಾಸ್ತವ' ಎಂಬ ಕಥಾಸಂಕಲನ ಹಾಗೂ 'ಬೆಳ್ಳಕ್ಕಿ ಸಾಲು' ಎಂಬ ಮಕ್ಕಳ ಕವಿತಾ ಸಂಕಲನಗಳು ಸೇರಿವೆ.
ನಿರ್ಮಲ ಅವರಿಗೆ 'ದೀಪದ ಕೆಳಗಿನ ಕತ್ತಲೆ' ಕಥೆಗೆ ಪ್ರೇಮಾ ಭಟ್ ಪ್ರಶಸ್ತಿ ಅಲ್ಲದೆ, ಸಿರಿಗನ್ನಡಪ್ರಕಾಶದ 'ಕನ್ನಡ ರತ್ನ ಪ್ರಶಸ್ತಿ' ಹಾಗೂ ಹಲವು ಸಂಘ ಸಂಸ್ಥೆಗಳ ಗೌರವಗಳು ಸಂದಿವೆ.
ನಿರ್ಮಲ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
Happy birthday Nirmala Maradihalli 🌷🌷🌷
ಧನ್ಯವಾದಗಳು
ಪ್ರತ್ಯುತ್ತರಅಳಿಸಿ