ಎಸ್. ಡಿ. ಫಡ್ನಿಸ್
ಶತಾಯುಷಿ ವ್ಯಂಗ್ಯಚಿತ್ರಕಾರ ಎಸ್. ಡಿ. ಫಡ್ನಿಸ್
Greate Cartoonist S.D. Fadnis celebrated his 100th birthday today 🌷🙏🌷
ಮಹಾನ್ ವ್ಯಂಗ್ಯಚಿತ್ರಕಾರ ಶಿವರಾಮ ದತ್ತಾತ್ರೇಯ ಫಡ್ನಿಸ್ ಇಂದು ತಮ್ಮ ನೂರನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ.
ಫಡ್ನಿಸ್ ಅವರು ಬೆಳಗಾವಿಯ ಜಿಲ್ಲೆಯ ಭೋಜ್ ಎಂಬಲ್ಲಿ 1925 ವರ್ಷದ ಜುಲೈ 29ರಂದು ಜನಿಸಿದರು. ಮುಂದೆ ಕೊಲ್ಲಾಪುರದಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದ ಅವರು 1949ರಲ್ಲಿ ಮುಂಬೈನ ಪ್ರತಿಷ್ಡಿತ ಜೆ ಜೆ ಸ್ಕೂಲ್ ಆಫ್ ಆರ್ಟ್ಸ್ ಇಂದ ಗ್ರಾಜುಯೇಟ್ ದಿಪ್ಲೋಮಾ ಗಳಿಸಿದರು.
ಫಡ್ನಿಸ್ ಅವರು ತಮ್ಮ ವ್ಯಾಸಂಗದ ದಿನಗಳಲ್ಲಿ ಮೊದಲು ಮನೋಹರ್ ಪತ್ರಿಕೆಗೆ ವ್ಯಂಗ್ಯಚಿತ್ರ ಬರೆದು ಅದು ಪ್ರಕಟವಾದಾಗ ಉತ್ತೇಜಿತರಾಗಿ ವ್ಯಂಗ್ಯಚಿತ್ರ ಮತ್ತು ಕಥಾ ಚಿತ್ರಗಳನ್ನು ಬರೆಯುತ್ತ ಜನಪ್ರಿಯರಾದರು. ಮೋಹಿನಿ
ನಿಯತಕಾಲಿಕ ಅವರಿಗೆ ಪ್ರಖ್ಯಾತಿ ತಂದಿತು.
ಫಡ್ನಿಸ್ ಅವರಿಗೆ Community Artists Guild, Indian Institute of Cartoonists ಗೌರವಗಳಝ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಫಡ್ನಿಸ್ ಅವರು ಪುಣೆಯಲ್ಲಿ ನೆಲೆಸಿದ್ದಾರೆ.
ಕಾಮೆಂಟ್‌ಗಳು