ಉದಯ ಇಟಗಿ
ಉದಯ ಇಟಗಿ
ಉದಯ ಇಟಗಿ ಅವರು ಶಿಕ್ಷಕರಾಗಿ ಮತ್ತು ಬರಹಗಾರರಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದಾರೆ.
ಜುಲೈ 22 ಉದಯ ಇಟಗಿ ಅವರ ಜನ್ಮದಿನ. ಇವರು ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳದವರು. ಲಿಬಿಯಾ ದೇಶದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಎಂಟು ವರ್ಷ ಕಾಲ ಇಂಗ್ಲೀಷ್ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ನಂತರ, ಸ್ವದೇಶದಲ್ಲಿ ನೆಲೆಸಿದ್ದು ಪ್ರಸಕ್ತ ಭರಮಸಾಗರದ ಡಿವಿಎಸ್ ಪಿಯು ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ.
ಉದಯ ಇಟಗಿ ಅವರು ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆಯ ಗೀಳನ್ನು ಅಂಟಿಸಿಕೊಂಡು, ಅನುವಾದ ಸಾಹಿತ್ಯದಲ್ಲಿ ಒಲವು ಬೆಳೆಸಿಕೊಂಡರು. ಇವರು ಬೇರೆ ಬೇರೆ ಭಾಷೆಯ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನೇಕ ಕವಿತೆ, ಲೇಖನಗಳು ಮತ್ತು ಅನುವಾದಿತ ಕಥೆಗಳು ನಾಡಿನ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಹಾಗೂ ವಿವಿಧ ಅಂತರಜಾಲ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಶಿಕ್ಷಣ, ಪ್ರವಾಸ, ಬ್ಲಾಗಿಂಗ್ ಮತ್ತು ತೋಟಗಾರಿಕೆಯಲ್ಲಿ ಇವರ ವಿಶೇಷ ಆಸಕ್ತಿಗಳಲ್ಲಿ ಸೇರಿವೆ. ಇವರ ‘ಲಿಬಿಯಾ ಡೈರಿ’ ಲಿಬಿಯಾ ದೇಶದ ಕುರಿತ ಕೃತಿಯಾಗಿದೆ. 'ಬಿಸಿಲಹನಿ' ಎಂಬುದು ಇವರ ಬ್ಲಾಗ್.
ಉದಯ ಇಟಗಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Uday Itagi 🌷🌷🌷
ಕಾಮೆಂಟ್‌ಗಳು