ಒಲವೆ
ಬೆಳ್ಳಿ ಬಂಗಾರ ಕಿರಣಗಳಲ್ಲಿ ಹೆಣೆದ
ಸ್ವರ್ಗದ ಕಸೂತಿವಸ್ತ್ರ ನನ್ನಲ್ಲಿದ್ದಿದ್ದರೆ,
ನಡುಹಗಲು ಕಾರಿರುಳು ಸಂಜೆ ಬೆಳಕುಗಳ
ಬಿಳಿ ನೀಲಿ ಮಬ್ಬು ಪತ್ತಲಗಳಿದ್ದಿದ್ದರೆ,
ಹಾಸಿಬಿಡುತ್ತಿದ್ದೆ ನಿನ್ನಡಿಗೆ ಅವನ್ನೆಲ್ಲ;
ನಾ ಬಡವ, ಬರಿ ಕನಸು ಬಳಿಯಿರುವುದೆಲ್ಲ;
ಕನಸುಗಳನೇ ಹಾಸಿ ಬಿಡುವೆ ಕಾಲಡಿಗೆ.
ಮೆಲ್ಲಗಡಿಯಿಡು ನೀನು ನಡೆವಾಗ ಒಲವೆ,
ನನ್ನ ಕನಸಿನ ಮೇಲೆಯೇ ನಡೆಯುತಿರುವೆ.
(ಏಟ್ಸ್ ಕವಿಯ ಕವನಗಳು - ಚಿನ್ನದ ಹಕ್ಕಿ - ಎನ್. ಎಸ್. ಲಕ್ಷ್ಮೀನಾರಾಯಣ ಭಟ್)
Had I the heavens’ embroidered cloths,
Enwrought with golden and silver light,
The blue and the dim and the dark cloths
Of night and light and the half light,
I would spread the cloths under your feet:
But I, being poor, have only my dreams;
I have spread my dreams under your feet;
Tread softly because you tread on my dreams.
(Poem by W. B. Yeats)
ಕಾಮೆಂಟ್‌ಗಳು