ದಿನೇಶ್ ಮಂಗಳೂರು
'ದಿನೇಶ್ ಮಂಗಳೂರು' ನಿಧನ
ರಂಗಭೂಮಿ ಮತ್ತು ಚಲನಚಿತ್ರ ನಟ, ಕಲಾ ನಿರ್ದೇಶಕ , ಆತ್ಮೀಯ ಗೆಳೆಯ ದಿನೇಶ್ ಮಂಗಳೂರು ಇಂದು (ದಿನಾಂಕ 25 ಆಗಸ್ಟ್ 2025 ರಂದು) ಬೆಳಗಿನ ಝಾವ 3.30 ರ ಸುಮಾರಿಗೆ ಕುಂದಾಪುರದಲ್ಲಿ ನಿಧನರಾಗಿದ್ದಾರೆ.
ದಿನೇಶ್ ಕಳೆದ ಒಂದು ವರುಷದಿಂದ ಸ್ವಲ್ಪ ಮಟ್ಟಿಗೆ ಅನಾರೋಗ್ಯದಿಂದ ಬಳಲುತ್ತಿದ್ದರು.
Brain haemorrhage ಆಗಿ ಕಳೆದ ಐದು ದಿನಗಳಿಂದ ಅವರು ಸರ್ಜನ್ಸ್ ಆಸ್ಪತ್ರೆಯಲ್ಲಿ ಇದ್ದರು. ಇಂದು ಸಂಜೆ ಬೆಂಗಳೂರಿಗೆ ದಿನೇಶ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಬರಲಿದ್ದು, ನಾಳೆ ಬೆಳಿಗ್ಗೆ ಸುಮನಹಳ್ಳಿ ಚಿತಾಗಾರದಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಲಿದೆ. (ಸುಮನಹಳ್ಳಿ ಬಿ ಎಮ್ ಟಿ ಸಿ ಬಸ್ ಡಿಪೋ ಪಕ್ಕದಲ್ಲಿ)
ಹಾಸ್ಯ ಪ್ರವೃತ್ತಿಯ, ಸೂಕ್ಷ ಸಂವೇದನೆಯ ದಿನೇಶ್ ರಂಗಭೂಮಿಯ ಹಲವು ತಂಡಗಳೊಟ್ಟಿಗೆ ಹಾಗೂ ಮಂಗಳೂರಿನ ರಂಗಭೂಮಿ ಸ್ನೇಹಿತರೊಟ್ಟಿಗೂ ಸಂಪರ್ಕ ಇಟ್ಟುಕೊಂಡಿದ್ದರು. ದಿನೇಶ್, ಕಷ್ಟದಲ್ಲಿರುವ ರಂಗಗೆಳೆಯರಿಗೆ, ರಂಗ ತಂಡಗಳಿಗೆ ಅವರ ಅವಶ್ಯಕತೆಗೆ ಸ್ಪಂದಿಸುವ ವ್ಯಕ್ತಿಯೂ ಆಗಿದ್ದರು.
ದಿನೇಶ್ ಅವರು ಕಲಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರೂ ಸಹ, ಸಿಕ್ಕ ಅವಕಾಶಗಳೆಲ್ಲದರಲ್ಲೂ ಕಲಾವಿದನಾಗಿಯೂ ಉತ್ತಮ ಅಭಿನಯ ನೀಡಿದ್ದರು.
ಅಗಲಿದ ಕಲಾವಿದರಿಗೆ ನಮನ.
ಮಾಹಿತಿ ಕೃಪೆ: ಗುಂಡಣ್ಣ, ಚಿಕ್ಕಮಗಳೂರು.
Respects to departed soul Theatre and film artiste Dinesh Mangalore 🌷🙏🌷
ಕಾಮೆಂಟ್‌ಗಳು