ಸುನೇತ್ರಾ ಪಂಡಿತ್
ಸುನೇತ್ರಾ ಪಂಡಿತ್
ಪ್ರಸಿದ್ಧ ಕಿರುತೆರೆ ಕಲಾವಿದೆ, ಚಲನಚಿತ್ರ ಧ್ವನಿ ಕಲಾವಿದೆ, ಚಲನಚಿತ್ರಗಳಲ್ಲೂ ಅಭಿನಯಿಸುತ್ತಿರುವ ಸುನೇತ್ರಾ ಪಂಡಿತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಪ್ರಸಿದ್ಧ 'ಸಿಲ್ಲಿ ಲಲ್ಲಿ' ಧಾರಾವಾಹಿಯ ವಿಶಾಲೂ ಪಾತ್ರದಲ್ಲಿ ಹೆಸರಾದ ಸುನೇತ್ರಾ ಪಂಡಿತ್ ಭಾಗ್ಯಲಕ್ಷ್ಮಿ ಹಾಗೂ ಅನೇಕ ಕಿರುತೆರೆಯ ಧಾರಾವಾಹಿಗಳಲ್ಲಿ ಬಹುಮುಖಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಲನಚಿತ್ರಗಳಲ್ಲಿನ ಧ್ವನಿ ಕಲಾವಿದರಾಗಿ ಅನೇಕ ಪ್ರಸಿದ್ಧ ನಟಿಯರಿಗೆ ಕಂಠದಾನ ಮಾಡಿದ್ದಾರೆ. 'ಉಲ್ಟಾ ಪಲ್ಟ', 'ನಿನಗೋಸ್ಕರ', 'ಯಾರೇ ನೀನು ಚೆಲುವೆ' ಮುಂತಾದ ಹಲವಾರು ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ಸುನೇತ್ರಾ ಪಂಡಿತ್ ಅವರ ಪತಿ ರಮೇಶ್ ಪಂಡಿತ್ ಅವರು ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರಗಳ ಹೆಸರಾಂತ ಕಲಾವಿದರು.
ಈ ಪ್ರತಿಭಾನ್ವಿತ ದಂಪತಿಗೆ ಶುಭವಾಗಲಿ 🌷🌷🌷
Happy birthday Sunetra Pandit 🌷🌷🌷

ಕಾಮೆಂಟ್‌ಗಳು