ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೀನತ್ ಅಮಾನ್

 


ಜೀನತ್ ಅಮಾನ್

ಜೀನತ್ ಅಮಾನ್ ಹಿಂದೀ ಚಲನಚಿತ್ರಲೋಕದ ಪ್ರಸಿದ್ದ ತಾರೆ.

ಜೀನತ್ ಅಮಾನ್ ಅವರು 1951ರ ನವೆಂಬರ್ 19ರಂದು ಮುಂಬೈನಲ್ಲಿ ಜನಿಸಿದರು.  ಅಮೆರಿಕದಲ್ಲಿ ಕಾಲೇಜು ವಿದ್ಯಾಭ್ಯಾಸಕ್ಕೆ ತೊಡಗಿದರೂ ಪೂರ್ಣಗೊಳಿಸಲಿಲ್ಲ. 

ಜೀನತ್ ಅಮಾನ್ 1970 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ ಮತ್ತು ಮಿಸ್ ಏಷ್ಯಾ ಪೆಸಿಫಿಕ್ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದರು.  ನಂತರ ಚಿತ್ರರಂಗದಲ್ಲಿ ಪ್ರಾರಂಭಿಕವಾಗಿ ದಿ ಇವಿಲ್ ವಿಥಿನ್, ಹಂಗಾಮಾ ಮತ್ತು ಹಲ್ಚುಲ್ (೧೯೭೧) ಚಿತ್ರಗಳಲ್ಲಿ ಕಾಣಿಸಿಕೊಂಡರು.  ದೇವ್ ಆನಂದ್ ಅವರ ಹರೇ ರಾಮ ಹರೇ ಕೃಷ್ಣ (1971) ಚಿತ್ರದಲ್ಲಿನ ಪಾತ್ರ ನಿರ್ವಹಣೆ ಅವರಿಗೆ ಯಶಸ್ಸು ಮತ್ತು  ಫಿಲ್ಮ್‌ಫೇರ್ ಪ್ರಶಸ್ತಿ ತಂದುಕೊಟ್ಟಿತು . 1970 ರ ದಶಕದಲ್ಲಿ ಅವರು ಯಾದೋಂಕಿ ಬಾರಾತ್ (1973), ರೋಟಿ ಕಪಡಾ ಔರ್ ಮಕಾನ್ (1974), ಅಜನಾಬೀ (1974 ), ವಾರಂಟ್ (1975), ಚೋರಿ ಮೇರಾ ಕಾಮ್ (1975), ಧರಮ್ ವೀರ್ ( 1977) , ಛೈಲ್ಲಾ ಬಾಬು (1977) , ಹಮ್ ಕಿಸೀಸೆ ಕಮ್ ನಹೀನ್ (1977), ಡಾನ್ (1978),  ಸತ್ಯಂ ಶಿವಂ ಸುಂದರಂ (1978), ದಿ ಗ್ರೇಟ್ ಗ್ಯಾಂಬ್ಲರ್ (1979) ಅಂತಹ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುವ ಮೂಲಕ ಪ್ರಾಮುಖ್ಯತೆಯನ್ನು ಪಡೆದರು. 1980 ರ ದಶಕದಲ್ಲಿ ಅಮನ್ ಅಬ್ದುಲ್ಲಾ (1980), ಅಲಿಬಾಬಾ ಔರ್ 40 ಚೋರ್ (1980), ಕುರ್ಬಾನಿ (1980), ದೋಸ್ತಾನಾ (1980), ಮತ್ತು ಇನ್ಸಾಫ್ ಕಾ ತರಾಜು (1980), ಲಾವರಿಸ್ (1981), ತೀಸ್ರಿ ಆಂಖ್ (1982), ಮಹಾನ್ (1983), ಪುಕಾರ್ (1983), ಜಾಗೀರ್ (1984) ಮುಂತಾದ  ಚಿತ್ರಗಳಲ್ಲಿ ನಟಿಸಿದ್ದರು. 

ಸಂಜಯ್  ಖಾನ್ ಅವರೊಂದಿಗೆ ವಿವಾಹ ಮತ್ತು ವಿಚ್ಛೇದನ, ನಟ ಮಜರ್ ಖಾನ್ ಅವರೊಂದಿಗೆ ವಿವಾಹ ಹಾಗೂ ಮಜರ್ ಖಾನ್

ಮರಣ (1998) ಹೀಗೆ ಅವರ ಬದುಕು ಹಲವು ದಿಶೆಗಳಲ್ಲಿ ಸಾಗಿತು.  ನಂತರದ ವರ್ಷಗಳಲ್ಲಿಯೂ ಅಲ್ಲಲ್ಲಿ ಅಭಿನಯಿಸಿದ್ದಾರೆ.

ಜೀನತ್ ಅಮಾನ್ ಅವರಿಗೆ ಕೆಲವು ಫಿಲಂ ಫೇರ್ ಪ್ರಶಸ್ತಿ ಮತ್ತು ಚಲನಚಿತ್ರ ಜೀವಮಾನ ಸಾಧನೆಯ ಪ್ರಶಸ್ತಿಗಳು ಸಂದಿವೆ. 


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ