ಸುಚರಿತ ಚಂದ್ರ
ಸುಚರಿತ ಚಂದ್ರ
ಬೆಂಗಳೂರು ಸೈನ್ಸ್ ಫೋರಮ್‍ನ ಕಾರ್ಯದರ್ಶಿಗಳು, ಬೆಂಗಳೂರು ಲಲಿತ ಕಲಾ ಪರಿಷತ್ತಿನ ಸಂಚಾಲಕರು ಹಾಗೂ ಬೆಂಗಳೂರು ಎನ್ವೈರ್ನಮೆಂಟ್ ಟ್ರಸ್ಟಿನ ಟ್ರಸ್ಟಿ ಆಗಿರುವ ಆತ್ಮೀಯ ಸಹೃದಯಿ ಪ್ರೊ. ಎಂ. ಸುಚರಿತ ಚಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಭಾರತ ಮತ್ತು ಅಮೆರಿಕಗಳಲ್ಲಿ ಸುದೀರ್ಘಕಾಲ ಪ್ರಾಧ್ಯಾಪನ ನಡೆಸಿದ ಕನ್ನಡತಿ ಸುಚರಿತ ಅವರ ವ್ಯಾಪಕ ಕ್ರಿಯಾಶೀಲತೆ ಬೆಂಗಳೂರಿನ ವಿಜ್ಞಾನ, ಲಲಿತ ಕಲೆ ಮತ್ತು ಪರಿಸರ ಚಟುವಟಿಕೆಗಳಿಗೆ ದೊರೆತಿರುವುದು ಅತ್ಯಂತ ಸಂತಸಕರ ವಿಷಯ. ಅವರಿಗಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳೂ ವಿಶಾಲ ವ್ಯಾಪ್ತಿಯದು.
ಸದಾ ಕ್ರಿಯಶೀಲರಾದ ಹಸನ್ಮುಖಿ ಸುಚರಿತ ಚಂದ್ರ ಅವರಿಗೆ ಆತ್ಮೀಯ ನಮಸ್ಕಾರ ಮತ್ತು ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🌷🙏🌷
Happy birthday Sucharita Chandra M 🌷🌷🌷

ಕಾಮೆಂಟ್‌ಗಳು