ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆನೂರು ಎಸ್. ರಾಮಕೃಷ್ಣ

 

ಆನೂರು ಎಸ್ ರಾಮಕೃಷ್ಣ

ವಿದ್ವಾನ್ ಆನೂರು ಎಸ್ ರಾಮಕೃಷ್ಣ ಅವರು ಮಹಾನ್ ಪಿಟೀಲು ವಾದಕರಾಗಿ, ಸಂಗೀತ ಪೋಷಕರಾಗಿ ಮತ್ತು ಮಹಾನ್ ಗುರುಗಳಾಗಿ ಪ್ರಸಿದ್ಧರಾದವರು.

ಆನೂರು ಎಸ್ ರಾಮಕೃಷ್ಣ  ಅವರು 1935ರ ನವೆಂಬರ್ 26ರಂದು ಜನಿಸಿದರು.  

ಪಿಟೀಲು ಚೌಡಯ್ಯನವರಿಗೆ,  ತಮ್ಮ ಶಿಷ್ಯರಲ್ಲದಿದ್ದರೂ ‍ ಆನೂರು ಎಸ್ ರಾಮಕೃಷ್ಣರ ಕುರಿತು ಅಪಾರ ಮಮತೆ ಮತ್ತು ವಿಶ್ವಾಸ.  ಹೀಗಾಗಿ ತಾವು ಸ್ಥಾಪಿಸಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಸುತ್ತಿದ್ದ ಅಯ್ಯನಾರ್ ಸಂಗೀತ ಶಾಲೆಯನ್ನು ನಡೆಸುವ ಜವಾಬ್ದಾರಿಯನ್ನು  ಆನೂರು ಎಸ್ ರಾಮಕೃಷ್ಣರಿಗೆ ವಹಿಸಿಕೊಟ್ಟರು.

ಸಂಗೀತಲೋಕದಲ್ಲಿ ಅಪಾರ ಸಾಧನೆ ಮಾಡಿ ಗಾನ ಕಲಾಭೂಷಣ ಗೌರವಾನ್ವಿತರಾಗಿದ್ದ ಆನೂರು ಎಸ್ ರಾಮಕೃಷ್ಣ ಅವರು 1968ರಲ್ಲಿ ನಾಡಿನ ಪ್ರಸಿದ್ಧ ಶ್ರೀ ಕೃಷ್ಣ ಸಂಗೀತ ಸಭಾವನ್ನು ಪ್ರಾರಭಿಸಿ ಪ್ರತಿಷ್ಟಿತ ಸಂಗೀತಗಾರರ ಸಂಗೀತ ಆಸ್ವಾದನೆಗೆ ಅವಕಾಶ ಮತ್ತು ಹೊಸ ಪ್ರತಿಭೆಗಳ ಅನ್ವೇಷಣೆ, ಪ್ರೇರಣೆ ಮತ್ತು ಪೋಷಣೆಗಳ ಮೂಲಕ ಸಂಗೀತ ಅಭಿರುಚಿ ವ್ಯಾಪಿಸುವಲ್ಲಿ ಅಪರಿಮಿತ ಕೊಡುಗೆ ನೀಡಿದರು.

ಸಂಗೀತ ಲೋಕದಲ್ಲಿ ಅಪರಿಮಿತ ಕೊಡುಗೆ ನೀಡಿದ ವಿದ್ವಾನ್ ಆನೂರು ಎಸ್ ರಾಮಕೃಷ್ಣ ಅವರ ಚೇತನಕ್ಕೆ ಅನಂತ ನಮನ.

On the Birth Anniversary of Great Violonist and Guru Vidwan Anoor S. Ramakrishna 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ