ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ ನರಸಿಂಗರಾವ್


 ರಾಜಸೇವಾಸಕ್ತ ನರಸಿಂಗರಾಯರು

B. Narasinga Rao, lawyer, eminent politician & well known personality 🌷🙏🌷

ಮೈಸೂರು ಮಹಾರಾಜರಿಂದ ರಾಜಸೇವಾಸಕ್ತ ಬಿರುದಾಂಕಿತರಾಗಿದ್ದ ಬಿ. ನರಸಿಂಗರಾಯರು 19 ಮತ್ತು 20ನೇ ಶತಮಾನದಲ್ಲಿದ್ದ ಕಾನೂನು ತಜ್ಞರು, ಪ್ರಜಾಪ್ರತಿನಿಧಿಗಳು ಹಾಗೂ ಸಮಾಜದ ಹಿತಚಿಂತನೆಗೆ ದುಡಿದ ಸೇವಾತತ್ಪರರು.  ಅವರ ಸುಪುತ್ರಿ ವಾಣಿ, ಹಾಗೂ ಮೊಮ್ಮಕ್ಕಳಾದ ತ್ರಿವೇಣಿ ಮತ್ತು ಆರ್ಯಾಂಭಾ ಪಟ್ಟಾಭಿ ಕನ್ನಡ ಸಾಹಿತ್ಯಲೋಕದ ಧ್ರುವತಾರೆಗಳಾಗಿ ಪ್ರಸಿದ್ಧರು. 

ನರಸಿಂಗರಾಯರು 1865 ವರ್ಷದಲ್ಲಿ ಜನಿಸಿದರು.  ಮದ್ದೂರು ತಾಲೂಕಿನ ಬೆಸಗರಗಳ್ಳಿ ಅವರ ಹುಟ್ಟೂರು.  ಸಂಪಿಗೆಯ ಹಿರಿಯಕ್ಕಮ್ಮನವರು ಅವರ ಪತ್ನಿ.  ವಕೀಲಿ ವೃತ್ತಿಗಾಗಿ ನರಸಿಂಗರಾಯರು ಅನೇಕ ವರ್ಷಗಳ ಕಾಲ ಶ್ರೀರಂಗಪಟ್ಟಣದಲ್ಲಿ ನೆಲೆಸಿದ್ದರು. ಹೀಗಾಗಿ ಇವರು ಪಟ್ಟಣದ ನರಸಿಂಗರಾಯರು ಎಂದೇ ಖ್ಯಾತರಾಗಿದ್ದರು.  ಇವರು ಶ್ರೀರಂಗಪಟ್ಟಣದ ಸುತ್ತಮುತ್ತಲಿನ ಸುಮಾರು 30 ಎಕರೆಗೆ ಜಮೀನುದಾರರಾಗಿದ್ದರು.

ನರಸಿಂಗರಾಯರಿಗೆ ದೇವರಯ್ಯ, ತಂಗಮ್ಮ ಮತ್ತು ಸುಬ್ಬಮ್ಮ ಎಂಬ ಮೂರು ಮಕ್ಕಳು.  ಈ ಸುಬ್ಬಮ್ಮ ಅವರೇ 'ವಾಣಿ' ಎಂಬ ಹೆಸರಿನ ಪ್ರಸಿದ್ಧ ಕಾದಂಬರಿಗಾರ್ತಿ.   ಹಾಗೆಯೇ ತ್ರಿವೇಣಿ ಎಂದು ಪ್ರಸಿದ್ಧರಾದ ಅನಸೂಯಾ ಶಂಕರ್ ಮತ್ತು ಅವರ ತಂಗಿ ಆರ್ಯಾಂಭಾ ಪಟ್ಟಾಭಿ ಅವರು ನರಸಿಂಹರಾಯರ ಪುತ್ರಿ ತಂಗಮ್ಮನವರ ಸುಪುತ್ರಿಯರು. 

ನರಸಿಂಗರಾಯರು ತಮ್ಮ ಪುತ್ರ ದೇವರಯ್ಯ ಅವರ ವಿದ್ಯಾಭ್ಯಾಸದ ಅನುಕೂಲತೆಗಾಗಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬಂದು ನೆಲೆಸಿದರು. ಮಹಾರಾಜ ಕಾಲೇಜಿನಲ್ಲಿ ಓದಿದ ದೇವರಯ್ಯನವರು ಬಿ ಎ ಮತ್ತು ಎಂ ಎ ಓದಿದ ನಂತರ ಮದ್ರಾಸಿನಲ್ಲಿ ಕಾನೂನು ಪದವಿ ಪೂರೈಸಿ ಹಿಂದಿರುಗಿದ ಬಂದಾಗ,  ಅವರು ಬೆಂಗಳೂರಿನ ಉಚ್ಚನ್ಯಾಯಾಲಯದಲ್ಲಿ ವಕೀಲಿ ನಡೆಸಲು ಅನುವಾಗುವಂತೆ ನರಸಿಂಗರಾಯರು ವಾಸ್ತವ್ಯವನ್ನು ಬೆಂಗಳೂರಿಗೆ ಬದಲಿಸಿದರು.

ಉತ್ತಮ ಹೆಸರುಗಳಿಸಿದ್ದ ನರಸಿಂಗರಾಯರು ಮೈಸೂರು ಸಂಸ್ಥಾನದ ಪ್ರಾತಿನಿಧಿಕ ಸಭೆ (Representative Assembly) ಸದಸ್ಯರಾಗಿದ್ದರು.  ಮೈಸೂರಿನ Masonic lodge (ಆರೋಗ್ಯಕರ ಸಾಮಾಜಿಕ ಹಿತಚಿಂತನೆಗಳ ಸೌಹಾರ್ದಯುತ ಸಂಘಟನೆ) ಸದಸ್ಯರಾಗಿದ್ದರು.  ನರಸಿಂಗರಾಯರ ಸೇವೆಯ ಕಾರಣದಿಂದ ಜನತೆಗೆ ಶಾಲೆ, ಅಂಚೆ ಸೌಲಭ್ಯ, ಸಹಕಾರ ಸಂಘಗಳ ಸೌಲಭ್ಯಗಳು ಲಭ್ಯವಾದವು.  ಹೆಣ್ಣುಮಕ್ಕಳಿಗೂ ವಿದ್ಯಾಭ್ಯಾಸ ಲಭ್ಯವಾಗಬೇಕು ಎಂಬ ನಿಲುವು ಹೊಂದಿದ್ದ ನರಸಿಂಗರಾಯರು ತಮ್ಮ ಹೆಣ್ಣುಮಕ್ಕಳನ್ನೂ  ವಿದ್ಯಾಭ್ಯಾಸಕ್ಕೆ ಕಳಿಸಿಕೊಟ್ಟು ಸಮಾಜವನ್ನು ಪ್ರೇರಿಸಿದರು.  ಅವರ ಕುಟುಂಬದ ತಲೆಮಾರುಗಳು ಕನ್ನಡ ಸಾಹಿತ್ಯ ಲೋಕವನ್ನು ದಿವ್ಯವಾಗಿ ಬೆಳಗಿದವು. 

ಮೈಸೂರಿನ ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನರಸಿಂಗರಾಯರಿಗೆ ರಾಜಸೇವಾಸಕ್ತ ಬಿರುದು ನೀಡಿ ಗೌರವಿಸಿದ್ದರು.

ಬಿ ನರಸಿಂಗರಾಯರು 1941 ವರ್ಷದಲ್ಲಿ ತಮ್ಮ76ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು

ಇದು ನರಸಿಂಗರಾಯರ ಮರಿ ಮಗಳು ಕೃಪಾ ಶ್ಯಾಮಸುಂದರ್ ಅವರ ಆಪ್ತ ಮಾತುಗಳು

The Child is the father of the man” William Wordsworth 

Some reason, this line always comes to my mind when I think of our great grandfather Sri Narsingha Rao. A maverick, who rose to fame with sheer hard-work, perseverance to be a great lawyer, eminent politician & well known personality. 

He was indeed way ahead of his times in his thinking. His foresight & smartness be in planning his son’s career, choosing spouses to all his children, investments & financial acumen amazes me. As MLC of srirangapatana, he helped establish post office, schools, realised the need for Co-operative societies & founded it. Ensured equal education opportunities to his daughters which helped set the foundation for future generations to excel!.

As father, he made a great influence on my grandmother. All her novels has one character with some of his traits. Most of his great / great great grandchildren have grown up listening to the stories of his life!!.

As the baton now gets passed on to future generations, I am sure “aa mane anna” as he was fondly addressed, will continue to bless & guide his lineage.

ಕೃತಜ್ಞತೆಗಳು: ದೀಪಾ ರಾವ್ Deepa Rao


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ