ಬಾಗೇಪಲ್ಲಿ ಕೃಷ್ಣಮೂರ್ತಿ
ಬಾಗೇಪಲ್ಲಿ ಕೃಷ್ಣಮೂರ್ತಿ
ಹಿರಿಯ ಸಾಹಿತಿಗಳಾದ ಬಾಗೇಪಲ್ಲಿ ಕೃಷ್ಣಮೂರ್ತಿ ಅವರ ಜನ್ಮದಿನ ಇಂದು ಎಂದುಕೊಂಡಿದ್ದೆ. ಪೂಜ್ಯರಾದ ಹಿರಿಯರು ತಮ್ಮ ಹುಟ್ಟು ಹಬ್ಬ ಜೂನ್ 17ರಂದು ಎಂದು ತಿಳಿಸಿದ್ದಾರೆ.
ಕೃಷ್ಣಮೂರ್ತಿ ಅವರು ಚಿಕ್ಕಮಗಳೂರು ಜಿಲ್ಲೆಯ ಬಾಗೇಪಲ್ಲಿಯವರು. ಅವರ ಬರಹಗಳು ಕಥೆ, ಕವನ, ಗಜಲ್, ಅನುವಾದ, ಪ್ರವಾಸ ಕಥನ, ಚಿಂತನ ಹೀಗೆ ಬಹುವ್ಯಾಪ್ತಿ ಹೊಂದಿದೆ.
ಬಾಗೇಪಲ್ಲಿ ಕೃಷ್ಣಮೂರ್ತಿ ಅವರ ಪ್ರಕಟಿತ ಕೃತಿಗಳಲ್ಲಿ 'ಚಿತ್ರಾವತಿಯ ಕಾಡುವ ನೆನಪುಗಳು', ರವೀಂದ್ರನಾಥ ಠಾಗೂರರ 'The Gardener’ ಅನುವಾದವಾದ 'ವನಮಾಲಿ', 'ವಿಜ್ಞಾನ ಲೋಕದ ಅಮರ ಜೀವಿಗಳು', 'ದ್ವೀಪವಾಸಿ ಭಾರತೀಯರು', 'ಗಿಬ್ರಾನ್ ಉವಾಚ', 'ಯೂರೋಪಿನಲ್ಲಿ ಬಾಗೇಪಲ್ಲಿ', 'ಬಿಂಬ' ಗಜಲ್‍ಗಳ ಸಂಕಲನ ಮುಂತಾದವು ಸೇರಿವೆ.
ಪೂಜ್ಯರಾದ ಬಾಗೇಪಲ್ಲಿ ಕೃಷ್ಣಮೂರ್ತಿ ಅವರಿಗೆ ಗೌರವಪೂರ್ವಕ ನಮನಗಳು.
Bagepally Krishnamurthy

ಕಾಮೆಂಟ್‌ಗಳು