ಧ್ವಜ ದಿನಾಚರಣೆ
ಭಾರತೀಯ ಸಶಸ್ತ್ರ ಸೇನಾಪಡೆ ಧ್ವಜ ದಿನಾಚರಣೆ
The Armed Forces Flag Day
ಭಾರತೀಯ ಸಶಸ್ತ್ರ ಸೇನಾಪಡೆಯ ಧ್ವಜ ದಿನಾಚರಣೆಯನ್ನು ಡಿಸೆಂಬರ್ 7ರ ದಿನವಾದ ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ.
ಭಾರತೀಯ ಸೈನಿಕರ ಕಲ್ಯಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಮೂಲಕ ಈ ದಿನವನ್ನು 1949ರಿಂದಲೂ ಆಚರಿಸಲಾಗುತ್ತಿದೆ. ಪ್ರತಿವರ್ಷವೂ ಭಾರತೀಯ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಎಲ್ಲಾ ಸೈನಿಕರಿಗೂ ಗೌರವ ಸಲ್ಲಿಸುವ ದಿನವೂ ಇದಾಗಿದೆ.
ಸ್ವಾತಂತ್ರ್ಯಾನಂತರ ದೇಶವನ್ನು ಕಾಯುವ ಸೈನಿಕರ ಶ್ರೇಯೋಭಿವೃದ್ಧಿಯ ಚಿಂತನೆಯಲ್ಲಿ ಮೂಡಿಬಂದ ಆಚರಣೆಯಿದು. ಇದರ ಫಲವಾಗಿ ಪುಟ್ಟ ಧ್ವಜವನ್ನು ಸಾರ್ವಜನಿಕರಿಗೆ ನೀಡಿ, ಅವರ ಮೂಲಕ ಕೈಲಾದಷ್ಟು ದೇಣಿಗೆ ಪಡೆದು, ಅದನ್ನು ಸೇನೆಗೆ ಅರ್ಪಿಸುವ ಮಹೋನ್ನತ ಕೆಲಸ ಆರಂಭಗೊಂಡಿತು.
ಈ ದೇಣಿಗೆಯಿಂದ ಸಂಗ್ರಹವಾದ ಹಣವನ್ನು ಸೈನಿಕರು ಮತ್ತು ಅವರ ಕುಟುಂಬದ ಶ್ರೇಯೋಭಿವೃದ್ಧಿಗೆ, ಯುದ್ಧದ ಸಮಯದ ಅಗತ್ಯಕ್ಕೆ ಹಾಗೂ ಮಾಜಿ ಸೈನಿಕರು ಮತ್ತವರ ಕುಟುಂಬದ ಕಲ್ಯಾಣಕ್ಕೆ ಬಳಸಲಾಗುತ್ತಿದೆ.
ದೇಶ ಕಾಯುತ್ತಿರುವ ಯೋಧರಿಗೆ ಗೌರವದಿಂದ ನಮಿಸೋಣ. 🌷🌷🌷
ಕಾಮೆಂಟ್ಗಳು