ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾರ್ಕ್ ಟುಲ್ಲಿ


 ಮಾರ್ಕ್ ಟುಲ್ಲಿ ನಿಧನ


ಮಹಾನ್ ಪತ್ರಕರ್ತ, ಲೇಖಕ, ಇತಿಹಾಸಕಾರ ಮಾರ್ಕ್‌ ಟುಲ್ಲಿ ಅವರು ನಿಧನರಾಗಿದ್ದಾರೆ.  ಅವರಿಗೆ 90 ವರ್ಷ ವಯಸ್ಸಾಗಿತ್ತು. 

1935ರ ಅಕ್ಟೋಬರ್ 24ರಂದು ಕೋಲ್ಕತ್ತದಲ್ಲಿ ಜನಿಸಿದ್ದ ಟುಲ್ಲಿ ಅವರು 22 ವರ್ಷ ಬಿಬಿಸಿ ದೆಹಲಿ ಬ್ಯೂರೊ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. 1974ರಲ್ಲಿ ಬಿಬಿಸಿಯನ್ನು ತೊರೆದ ಟುಲ್ಲಿ, ಬಿಬಿಸಿ ರೇಡಿಯೊದಲ್ಲಿ ಪ್ರಸಾರವಾಗುತ್ತಿದ್ದ ‘ಸಮ್‌ಥಿಂಗ್‌ ಅಂಡರ್‌ಸ್ಟುಡ್‌’  ಕಾರ್ಯಕ್ರಮದ ನಿರೂಪಕರಾಗಿದ್ದರು.  ಭಾರತ ಮತ್ತು ಬ್ರಿಟಿಷ್‌ ರಾಜರ ಸಾಕ್ಷ್ಯಚಿತ್ರದಿಂದ ಆರಂಭಗೊಂಡು ಭಾರತೀಯ ರೈಲ್ವೆ ಕುರಿತ ಸಾಕ್ಷ್ಯಚಿತ್ರಗಳವರೆಗೆ ಹಲವು ಸಾಕ್ಷ್ಯಚಿತ್ರಗಳ ಭಾಗವಾಗಿ ಟುಲ್ಲಿ ಕೆಲಸ ಮಾಡಿದ್ದರು.  ಬಾಂಗ್ಲಾದೇಶದ ಜೊತೆಗಿನ 1971ರ ಯುದ್ಧ, ತುರ್ತು ಪರಿಸ್ಥಿತಿ ಹೇರಿಕೆ ಸೇರಿದಂತೆ ಸ್ವಾತಂತ್ರೋತ್ತರ ಭಾರತದ ಐತಿಹಾಸಿಕ ಘಟನೆಗಳನ್ನು ಟುಲ್ಲಿ ಬಿಬಿಸಿಯಲ್ಲಿ ವರದಿ ಮಾಡಿದ್ದರು.

ಟುಲ್ಲಿ ಬಿಬಿಸಿಯಿಂದ ಹೊರಬಂದ ಬಳಿಕ ಯಾವುದೇ ಸಂಸ್ಥೆ ಸೇರದೆ ಸ್ವತಂತ್ರವಾಗಿ ಕೆಲಸ ಮಾಡಿದರು. ದೇಶದ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗಳನ್ನು ವಿಶ್ಲೇಷಿಸುತ್ತಿದ್ದರು.

‘ಆಪರೇಷನ್ ಬ್ಲೂ ಸ್ಟಾರ್‌ ಮತ್ತು ಪಂಜಾಬ್‌ ಸಮಸ್ಯೆಗಳ ಕುರಿತಾಗಿ ಬರೆದ ‘ಅಮೃತಸರ: ಮಿ.ಗಾಂಧೀಸ್‌ ಲಾಸ್ಟ್ ಬ್ಯಾಟಲ್‌’ ಪುಸ್ತಕವು ಟುಲ್ಲಿ ಅವರ ಮೊದಲ ಕೃತಿ. 'ನೋ ಫುಲ್ ಸ್ಟಾಪ್ಸ್‌ ಇನ್‌ ಇಂಡಿಯಾ’, ‘ಇಂಡಿಯಾ ಇನ್‌ ಸ್ಲೋ ಮೋಷನ್‌’ ಮತ್ತು ‘ದ ಆರ್ಟ್‌ ಆಫ್‌ ಇಂಡಿಯಾ’ ಸೇರಿದಂತೆ ಅವರು ಭಾರತದ ಬಗ್ಗೆ ಹಲವಾರು ಕೃತಿಗಳನ್ನು ಬರೆದಿದ್ದಾರೆ.‌ 

ಬ್ರಿಟನ್‌ ನೀಡುವ ಅತ್ಯುನ್ನತ ನೈಟ್‌ ಗೌರವವನ್ನು 2002ರಲ್ಲಿ ಪಡೆದ ಟುಲ್ಲಿ ಅವರಿಗೆ 1992ರಲ್ಲಿ ಪದ್ಮಶ್ರೀ ಮತ್ತು 2005ರಲ್ಲಿ  ಪದ್ಮಭೂಷಣ ಗೌರವ  ಸಂದಿತ್ತು.

ಮಾರ್ಕ್ ಟುಲ್ಲಿ ಅವರು 2026ರ ಜನವರಿ 25ರಂದು ದೆಹಲಿಯಲ್ಲಿ ನಿಧನರಾದರು. ಅಗಲಿದ ಮಹಾನ್ ಚೇತನಕ್ಕೆ ನಮನ.

Respects to departed soul Great Journalist and Historian Mark Tully 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ