ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗೇಶ್ ಕುಮಾರ್


 ಸಿ ಎಸ್ ನಾಗೇಶ್ ಕುಮಾರ್


ಸಿ ಎಸ್ ನಾಗೇಶ್ ಕುಮಾರ್ ಕತೆಗಾರರಾಗಿ ಸಾಧನೆ ಮಾಡಿರುವ ಬಹುಮುಖಿ ಸದಭಿರುಚಿಗಳುಳ್ಳ ಸಹೃದಯಿ.

ಮಾರ್ಚ್ 13, ನಾಗೇಶ್ ಕುಮಾರ್ ಅವರ ಜನ್ಮದಿನ.   ಮೂಲತಃ ಬೆಂಗಳೂರಿನವರಾದ ಇವರು ತಮ್ಮ ಇಂಜಿನಿಯರಿಂಗ್ ವೃತ್ತಿಯಲ್ಲಿ ವಿವಿಧ ನೆಲೆಗಳಲ್ಲಿ ಕಾರ್ಯನಿರ್ವಹಿಸಿದವರು. 16 ವರ್ಷಗಳ ಕಾಲ (2005-2021 ಅವಧಿಯಲ್ಲಿ) ಚೆನ್ನೈ ನಲ್ಲಿದ್ದುಕೊಂಡೇ ಕನ್ನಡ ಸಾಹಿತ್ಯ ಸೇವೆ ಮಾಡಿದವರು. 

ವಿಶೇಷವಾಗಿ ಕಳೆದ ದಶಕದಲ್ಲಿ ನಾಗೇಶ್ ಕುಮಾರ್ ಅವರ 10 ಪತ್ತೆದಾರಿ, ನಿಧಿಶೋಧ, ಅನ್ಯಗ್ರಹ ಜೀವಿಗಳ ಬಗೆಗಿನ ಕಾದಂಬರಿಗಳು ಹಾಗೂ 40ಕ್ಕೂ ಹೆಚ್ಚು ಕಥೆಗಳು ಪ್ರಕಟಗೊಂಡಿದ್ದು ಅವು ಸುಧಾ, ತರಂಗ, ಉತ್ಥಾನ, ಕರ್ಮವೀರ, ತುಷಾರ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಕಂಗೊಳಿಸಿವೆ.  ಇತ್ತೀಚೆಗೆ ಅವರ 'ಕೊನೆ ಹೇಗೋ ಅರಿಯಲಾರೆ' ಪತ್ತೆದಾರಿ ಕಾದಂಬರಿ 'ಸಾಹಿತ್ಯಲೋಕ ಪಬ್ಲಿಕೇಷನ್ಸ್' ಅವರಿಂದ ಪ್ರಕಟಗೊಂಡಿದೆ.

ನಾಗೇಶ್ ಕುಮಾರ್ ಅವರಿಗೆ  2019ರಲ್ಲಿ ಧಾರವಾಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಚಂದ್ರಶೇಖರ ಕಂಬಾರ ಮತ್ತು ಎಸ್ ಷಡಕ್ಷರಿ ಅವರಿಂದ ಹೊರನಾಡ ಕನ್ನಡಿಗ ಸಾಧಕ ( ತಮಿಳ್ನಾಡು)  ಸನ್ಮಾನ ಸಂದಿತ್ತು. 

ಸಾಹಿತ್ಯಪ್ರೇಮಿ, ಸಹೃದಯಿ, ಕತೆಗಾರರಾದ ಸಿ ಎಸ್ ನಾಗೇಶ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Nagesh Kumar Writes 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ