ಪರಾಭವ
ಪರಾಭವದ ಹುಡು'ಕಾಟ'ದಲ್ಲಿ
ನಾವು ಇದ್ದದ್ದನ್ನು ಇದ್ದ ಹಾಗೆ (As is) ಮನೋಭಾವದಲ್ಲಿ ಯಾವುದನ್ನೂ ಕಾಣುವುದಿಲ್ಲ ಎಂಬುದಕ್ಕೆ ನಿನ್ನೆ ಆರಂಭವಾದ 'ಪರಾಭವ ಸಂವತ್ಸರ'ದ ಹೆಸರು ಪಕ್ವವಾದ ಉದಾಹರಣೆ.
ಪರಾಭವ ಅಂದ್ರೆ ನನಗೇ ಪರಾಭವ ಆಗುತ್ತೆ, ನಾನು ನಂಬಿದಕ್ಕೇ ಪರಾಭವ ಆಗುತ್ತೆ ಎಂಬ ಆತಂಕದಲ್ಲಿ ಹಲವು ಜನ ವಿಲವಿಲನೆ ಯದ್ಬಾತದ್ವಾ ಅರ್ಥಗಳನ್ನು ತಮ್ಮ ಬುದ್ದಿಶಕ್ತಿಗಳನ್ನು ಮೀರಿ ಅರಸಹೊರಟಿದ್ದಾರೆ. ತಮಗೆ ಪರಾಭವ ಆಗದಿರಲಿ ಎಂದು ಹಲವರು ಹಲವು ಪಂಡ ಪುಂಡರ ಹಿಂದೆ ಪರಿಹಾರಕ್ಕೆ ಮೊರೆಹೋಗಿದ್ದರೂ ಅಚ್ಚರಿಯಿಲ್ಲ.
ಪರಾಭವಕ್ಕೆ ಬೇರೆ ಬೇರೆ ಅರ್ಥಗಳಿರಬಹುದು ಅಥವಾ ಇಲ್ಲದಿರಬಹುದು. ಸಾಮಾನ್ಯರಾಗಿ, ನಾವು ಶಾಲೆಯಲ್ಲದ್ದೇವೆ ಎಂದುಕೊಂಡು ಈ ಪದಕ್ಕೆ ಒಬ್ಬ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಮೂಡುವ ಒಂದು ಅರ್ಥ ಏನಿದೆಯೋ ಅದಕ್ಕಿಂತ ಮಿಗಿಲಾಗಿ ಅರ್ಥ ಹುಡುಕುವುದು ಅಸಹಜ ಪ್ರಯತ್ನ ಮತ್ತು ಅಪಕ್ವತೆಯ ಮನೋಭಾವವಾಗುತ್ತದೆ.
ಪರಾಭವ ಅಂದರೆ ನಮಗೆ ಸೋಲು ಕಟ್ಟಿಟ್ಡಬುತ್ತಿ ಎಂಬ ಚಿಂತನೆಯೇ ಮೌಢ್ಯದ್ದು. ನಿಜವಾದ ಪರಾಭವ ಆಗಬೇಕಿರುವುದೇ ನಾನು ಅಂದುಕೊಂಡಿರುವುದೆಲ್ಲ ಆಗಿಬಿಡುತ್ತದೆ, ಇಲ್ಲವೇ ಆಗಿಬಿಡಬೇಕು ಎಂಬ ಮನುಷ್ಯನ ದುರಂಹಾರಕ್ಕೆ. ನನಗೆ ಪರಾಭವವೇ ಇಲ್ಲ ಎಂದು ಹುಚ್ಚರಂತೆ ಒಬ್ಬರನ್ನು ಒಬ್ಬರು ಧ್ವಂಸ ಮಾಡಲು ಹೊರಟಿರುವ ವಿಶ್ವದೆಲ್ಲೆಡೆಯ ಅಸುರ ಶಕ್ತಿಗಳಲ್ಲಿ ಮತ್ತು ಆ ಶಕ್ತಿಗಳ ನಡುವೆ
ಸಿಲುಕಿಕೊಂಡಿರುವವರ ನಡುವೆ ಪರಾಭವ ಹೊಂದದಿರುವವರಾದರೂ ಯಾರು.
ಅನಗತ್ಯವಾಗಿ ಚಿಂತಿಸದೆ ನಮ್ಮ ದುರಂಹಾರಗಳಿಗೆ ಪರಾಭವ ಆಶಿಸಿ, ಶಾಂತಿ ಸಹನೆ ಪ್ರೀತಿಗಳಿಗಾಗಿ ಬದುಕೋಣ.

ಕಾಮೆಂಟ್‌ಗಳು