ಜಗದೋದ್ಧಾರನ
ಆಡಿಸಿದಳೆಶೋದಾ
ಜಗದೋದ್ಧಾರನ
ಜಗದೋದ್ಧಾರನ
ಮಗನೆಂದು ತಿಳಿಯುತ
ಮಗುಗಳ
ಮಾಣಿಕ್ಯನ ಆಡಿಸಿದಳೆಶೋದಾ
ನಿಗಮಕೆ
ಸಿಲುಕದ ಅಗಣಿತ ಮಹಿಮನ
ಸುಗುಣಾಂತ
ರಂಗನ ಆಡಿಸಿದಳೆಶೋದಾ
ಅಣೋರಣೀಯನ
ಮಹತೋಮಹೀಯನ
ಅಪ್ರಮೇಯನ
ಆಡಿಸಿದೆಳೆಶೋದಾ
ಪರಮ
ಪುರುಷನ ಪರವಾಸು ದೇವನ
ಪುರಂದರ
ವಿಠ್ಠಲನ ಆಡಿಸಿದಳೆಶೋದಾ
ಸಾಹಿತ್ಯ: ಪುರಂದರದಾಸರು
Tag: Jagadoddaarana adisidale yashoda
ಕಾಮೆಂಟ್‌ಗಳು