ಕರಿಗಿರಿಯಾಚಾರ್
ಟಿ. ವಿ. ಕರಿಗಿರಿಯಾಚಾರ್
ನಾದಗಂಧರ್ವ ಕರಿಗಿರಿಯಾಚಾರ್ ಪ್ರಭಾತ್ ಕಲಾವಿದರು ಸಂಸ್ಥೆಯ ನಾಲ್ವರು ಸ್ಥಾಪಕ ಸಹೋದರರಲ್ಲಿ ಹಿರಿಯರು.
ಕರಿಗಿರಿಯಾಚಾರ್ ಅವರು 1909ರ ಜೂನ್ 5 ರಂದು ಜನಿಸಿದರು. ಅವರು ಬರಹಗಾರ, ಕವಿ, ನಾಟಕಕಾರ, ನಟ ಅಲ್ಲದೆ, ಹಾರ್ಮೋನಿಯಂ ಮತ್ತು ಸೊಲೊವಾಕ್ಸ್ ವಾದನಕ್ಕೆ ಬಹಳ ಪ್ರಸಿದ್ಧರಾಗಿದ್ದರು. ಅವರು ತಮ್ಮ ಕಿರಿಯ ಸಹೋದರರಿಗೆ ಹರಿಕಥೆಯಲ್ಲಿ ತರಬೇತಿ ನೀಡಿದರು. ಅದನ್ನು ಅವರು ತಮ್ಮ ತಂದೆ ಟಿ. ವೆಂಕಣ್ಣದಾಸರು ಮತ್ತು ಚಿಕ್ಕಪ್ಪ ಟಿ. ಕೆ. ವೇಣುಗೋಪಾಲದಾಸರು ಅವರಿಂದ ಕಲಿತಿದ್ದರು.
ಕರಿಗಿರಿಯಾಚಾರ್ ಅವರು ನ್ಯಾಶನಲ್ ಹೈಸ್ಕೂಲಿನಲ್ಲಿ.ಜನಪ್ರಿಯ ಶಿಕ್ಷಕರಾಗಿದ್ದರು. ನಿವೃತ್ತಿಯ ನಂತರ ಹೋಮಿಯೋಪತಿಯಲ್ಲಿ ಪದವಿ ಪಡೆದು, ವೈದ್ಯದಲ್ಲಿ ಮನೆಮಾತಾದರು. ಕರ್ನಾಟಕದಾದ್ಯಂತ ಜನರು ಅವರಿಂದ ಚಿಕಿತ್ಸೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ದೇಶದಾದ್ಯಂತ ಅನೇಕ ಸುಪ್ರಸಿದ್ಧರು ಸೇರಿದಂತೆ ಎಲ್ಲ ಬಗೆಯ ಜನರು ಅವರ ಬಳಿ ಚಿಕಿತ್ಸೆಗೆ ಬರುತ್ತಿದ್ದರು.
ಕರಿಗಿರಿಯಾಚಾರ್ ಅವರು ಕನ್ನಡದಲ್ಲಿ ಮಕ್ಕಳಿಗಾಗಿ ಪದ್ಯಗಳನ್ನು ಬರೆಯುವಲ್ಲಿ ನಿಪುಣರಾಗಿದ್ದರು, ಅವುಗಳನ್ನು ಅವರು ನ್ಯಾಷನಲ್ ಹೈಸ್ಕೂಲ್‌ನಲ್ಲಿ ಮತ್ತು ಮನೆಯಲ್ಲಿ ಮಕ್ಕಳಿಗೆ ಕಲಿಸುತ್ತಿದ್ದರು. ಸರಳ ಆಕರ್ಷಕ ಭಾಷೆಯಲ್ಲಿದ್ದ ಅವರ
ಪದ್ಯಗಳು ಅತ್ಯಂತ ಜನಪ್ರಿಯವಾಗಿತ್ತು.
ಈ ಹಾಡುಗಳನ್ನು ಪ್ರಭಾತ್ ಶಿಶುವಿಹಾರದಲ್ಲಿಯೂ ಕಲಿಸಲಾಗುತ್ತಿತ್ತು. ಇಂದಿಗೂ ಪ್ರಪಂಚದಾದ್ಯಂತ ಇರುವ ಅವರ ವಿದ್ಯಾರ್ಥಿಗಳಾಗಿದ್ದ ಅನೇಕರು ಅವರನ್ನು ಮತ್ತು ಅವರಿಂದ ಕಲಿತ ಹಾಡುಗಳು ಮತ್ತು ಪ್ರಾಸಗಳನ್ನು ನೆನಪಿಸಿಕೊಳ್ಳುತ್ತಾರೆ. ಕರಿಗಿರಿಯಾಚಾರ್ ಮತ್ತು ಅವರ ಕಿರಿಯ ಸಹೋದರರಾದ ಗೋಪಿನಾಥ ದಾಸ್ ಮತ್ತು ಜಯಸಿಂಹದಾಸ್ ಅವರುಗಳು ವಿಶೇಷವಾಗಿ ನರ್ಸರಿ ಮಕ್ಕಳಿಗಾಗಿ ಹಾಡುಗಳನ್ನು ಬರೆದರು. ಇವುಗಳ ಮೊದಲ ಸಂಗ್ರಹವಾಗಿ ‘ನಾಗರಿ ತಿಮ್ಮ’ ಎಂಬ ಪುಸ್ತಕವನ್ನು ಪ್ರಕಟಿಸಲಾಗಿತ್ತು. ಇದರಲ್ಲಿ ಮೂವರು ಸಹೋದರರು ಬರೆದ ಹಾಡುಗಳಿವೆ. ಇದು ಕರ್ನಾಟಕದ ಎಲ್ಲಾ ಪ್ರಾಥಮಿಕ ಮತ್ತು ನರ್ಸರಿ ಶಾಲೆಗಳಲ್ಲಿ ಬಹಳ ಜನಪ್ರಿಯವಾಯಿತು. ಕೆಲವು ವರ್ಷಗಳ ನಂತರ ಪುಸ್ತಕದ ಶೀರ್ಷಿಕೆಯನ್ನು 'ಜೋಡಿ ಕಹಳೆ' ಎಂದು ಬದಲಾಯಿಸಲಾಯಿತು. ಇದರಲ್ಲಿನ ಎಲ್ಲಾ ಹಾಡುಗಳನ್ನು ಮೈಸೂರು ಅನಂತ ಸ್ವಾಮಿ ಅವರ ಸಂಗೀತ ಸಂಯೋಜನೆಯಲ್ಲಿ ಕ್ಯಾಸೆಟ್‌ಗಳು ಮತ್ತು ಸಿಡಿಗಳ ರೂಪದಲ್ಲಿ ಪ್ರಭಾತ್ ಸೌಂಡ್ ಸ್ಟುಡಿಯೋ ಹೊರತಂದಿತ್ತು. ಮುಖ್ಯವಾಗಿ ಪ್ರಕೃತಿ, ನಾಯಕರು, ದೇಶಭಕ್ತಿ ಮತ್ತು ಮಾನವಕುಲದ ಮೇಲಿನ ಪ್ರೀತಿಯನ್ನು ಆಧರಿಸಿದ್ದ ಈ ಪದ್ಯಗಳಲ್ಲಿ ಮಳೆ ಬಂತು ಮಳೆ, ಆಡುವಾ ಬಾ ಗಿಣಿಯೇ, ಬಿಡು ಬಿಡು ಸಾಭಿ ಜಟಕಾ ಗಾಡಿ ಅಂತಹ ಸರಳ ಸುಂದರ ಗೀತೆಗಳು ಅಂದಿನ ಕಾಲಕ್ಕೆ ಸೇರಿದವರ ನೆನಪಲ್ಲಿ ಇಂದಿಗೂ ಮಾಸದಂತಿವೆ.
ಕರಿಗಿರಿಯಾಚಾರ್ ಅವರು 1989ರ ಏಪ್ರಿಲ್ 17 ರಂದು ಈ ಲೋಕವನ್ನಗಲಿದರು.
ಮಾಹಿತಿ ಆಧಾರ: Vasudeva Jayasimhachar ಅವರ ಇಂಗ್ಲಿಷ್ ಬರಹ
On the birth anniversary of Great Scholar, Teacher, Doctor and Artiste T V Karigiri Achar🌷🙏🌷

ಕಾಮೆಂಟ್‌ಗಳು