ಮಾರ್ಜಾನ್ ಸತ್ರಪಿ
ಮಾರ್ಜಾನ್ ಸತ್ರಪಿ ನಿಧನ
ವಿಶ್ವಪ್ರಸಿದ್ಧ ಗ್ರಾಫಿಕ್ ಕಥನಗಾರ್ತಿ ಮಾರ್ಜಾನ್ ಸತ್ರಪಿ ನಿಧನರಾಗಿದ್ದಾರೆ. ಅವರು ಚಿತ್ರ ನಿರ್ದೇಶನ ಮತ್ತು ಮಕ್ಕಳ ಸಾಹಿತ್ಯದಲ್ಲೂ ಸಾಧನೆ ಮಾಡಿದ್ದರು.
ಮಾರ್ಜಾನ್ ಸತ್ರಪಿ 1969 ರಲ್ಲಿ ಇರಾನ್‌ನ ರಾಶ್ಟ್‌ನಲ್ಲಿ ಜನಿಸಿ, ಟೆಹ್ರಾನ್‌ನಲ್ಲಿ ಬೆಳೆದರು, ಅಲ್ಲಿ ಅವರು ಫ್ರೆಂಚ್ ಶಾಲೆಯಲ್ಲಿ ಅಧ್ಯಯನ ಮಾಡಿ, ನಂತರ ವಿಯೆನ್ನಾ ಮತ್ತು ನಂತರ ಸ್ಟ್ರಾಸ್‌ಬರ್ಗ್‌ಗೆ ಚಿತ್ರಕಥನ (illustration) ಅಧ್ಯಯನಕ್ಕಾಗಿ ತೆರಳಿದರು. ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದ ಅವರು ನ್ಯೂಯಾರ್ಕರ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿನ ಹೆಸರಾಂತ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಚಿತ್ರಕಥನಗಳನ್ನು ಮೂಡಿಸುತ್ತಿದ್ದರು.
ಮಾರ್ಜಾನ್ ಸತ್ರಪಿ ಅವರ ಪ್ರಶಸ್ತಿ ವಿಜೇತ ಗ್ರಾಫಿಕ್ ಆತ್ಮಚರಿತ್ರೆ ‘ಪರ್ಸೆಪೊಲಿಸ್’ (Persepolis) ವಿಶ್ವದಾದ್ಯಂತ ಅಪಾರ ಮಾರಾಟ ಕಂಡಿತ್ತು. ಸತ್ರಪಿ ಅದನ್ನು ಚಲನಚಿತ್ರವನ್ನಾಗಿಯೂ ಮೂಡಿಸಿದ್ದರು. ಈ ಕೃತಿ ಅದೇ ಮೂಲಹೆಸರಿನಲ್ಲಿ ಪ್ರೀತಿ ನಾಗರಾಜ್ ಅವರ ಅನುವಾದದಲ್ಲಿ ಕನ್ನಡದಲ್ಲಿಯೂ ಪ್ರಕಟಗೊಂಡಿದೆ. ಸತ್ರಪಿ ಅವರ ಇತರ ಪ್ರಸಿದ್ಧ ಕೃತಿಗಳಲ್ಲಿ ಗ್ರಾಫಿಕ್ ಕಾದಂಬರಿ Chicken with Plums; Woman, Life, Freedom; ಮತ್ತು Marie Curie ಅವರ ಜೀವನಚರಿತ್ರೆಯಾದ Radioactive ಸೇರಿವೆ.
ಪ್ರಸಿದ್ಧ ಬರಹಗಾರ್ತಿ ಮಾರ್ಜಾನ್ ಸತ್ರಪಿ ಅವರು ಇನ್ನೂ 56ರ ವಯಸ್ಸಿನಲ್ಲಿ ನಿಧನರಾಗಿರುವುದು ದುಃಖಕರ.
Respects to departed soul Graphic Novelist Marjane Satrapi🌷🙏🌷

ಕಾಮೆಂಟ್‌ಗಳು