ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವ ಪರಿಸರ ದಿನ


ದಿನದ ಪ್ರತಿಕ್ಷಣಗಳನ್ನೂ ಕಳೆದು
ಹುಡುಕುತ್ತೇವೆ ಹೊಸದಿನ;
ವರುಷದ ಎಲ್ಲಾ ದಿನಗಳಲ್ಲೂ ಕಳೆದುಹೋಗಿ
ಕಾಯುತ್ತೇವೆ ವರುಷಕ್ಕೊಂದು ಹೊಸದಿನ.

ಇರುವುದನ್ನೆಲ್ಲಾ ಹಾಳುಮಾಡಿ ಕರೆಯುತ್ತೇವೆ
ಬಾ ನಮ್ಮ ಬದುಕಿಗೆ ನವೋದಯವೆ ಎಂದು;
ನಮ್ಮ ಸುತ್ತಮುತ್ತಲನ್ನೆಲ್ಲ ಕಸದರಾಶಿಯಾಗಿಸಿ
ಹೊರಟಿದ್ದೇವೆ ನವೋತ್ಸಾಹದ ಪ್ರವಾಸಕೆಂದು.

ಇರುವುದೊಂದೇ ಭೂಮಿ, ಇರುವುದೊಂದೇ ಬದುಕು
ಇರುವುದೊಂದೇ ಆತ್ಮ,  ಇರುವುದೊಂದೇ ಜಗ;
ನಮ್ಮನೆಲ ಕೊಳಕಿಸೆ, ಬದುಕು ನಿಲುಕೀತೆ
ನಮ್ಮೊಳಗು ಕ್ಷೀಣಿಸುತಿರೆ, ಜಗವಿಸ್ತರಿಸೀತೆ?

ಪ್ರತೀಕ್ಷಣ ನಮ್ಮ ಜಗದಲ್ಲಿ ವಿಷವುಗುಳಿ
ವರ್ಷಕ್ಕೊಮ್ಮೆ ಹಸಿರ ತೋರಣಕ್ಕೆ ಎಲೆ ಹುಡುಕುವ
ಭಂಡ ಬದುಕು ನಿಲಿಸೋಣ,
ಸ್ವಚ್ಚ ಬದುಕಿನ ಬಾಳನ್ನು ತಪವಾಗಿಸೋಣ.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ