ಎಂ.ಸರಸ್ವತಿ ಗೌಡ
ಎಂ. ಸರಸ್ವತಿ ಗೌಡ
ಎಂ. ಸರಸ್ವತಿ ಗೌಡ ಲೇಖಕಿ ಮತ್ತು ಪತ್ರಕರ್ತೆಯಾಗಿ ಪರಿಚಿತರು.
ಸರಸ್ವತಿ ಅವರು 1952 ರ ಜೂನ್ 17ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮತ್ತೀಕೆರೆಯಲ್ಲಿ ಜನಿಸಿದರು. ತಂದೆ ಎಂ.ಟಿ. ತಿಮ್ಮೇಗೌಡ. ತಾಯಿ ಬಿ.ಕೆ. ತಾಯಮ್ಮ. ಸರಸ್ವತಿ ಅವರು ಕಲಾ ಪದವೀಧರೆ.
ಮುಂಗಾರು, ದೌಪದಿಯ ಸ್ವಗತ, ಪರಿಧಿಯಾಚೆ, ಮಣ್ಣು ಪಾಲಾಗದ ಪ್ರತಿಮೆಗಳು, ನೆಲದಕಣ್ಣು, ಹಿಡಿತುಂಬ ಹೂವು ಸರಸ್ವತಿ ಗೌಡ ಅವರ ಕವನ ಸಂಕಲನಗಳು. ಬೆಟ್ಟ, ವಿದಾಯ, ಕಾತ್ಯಾನಿ, ಕಣಿವೆಗಿಳಿದ ಬೆಳಕು, ಹೃದಯ ಬಂಧನ, ನೆನಪುಗಳ ಮೊಗ್ಗೊಡೆದವು ಮುಂತಾದವು ಕಾದಂಬರಿಗಳು. ಸಾಲು, ತೆರೆದಿಟ್ಟ ಪುಟ ಕಥಾ ಇವರ ಕಥಾಸಂಕಲನಗಳು.
ಸರಸ್ವತಿ ಗೌಡ ಅವರು ಸ್ತ್ರೀಶಕ್ತಿ ವಾರಪತ್ರಿಕೆಯ ಸಂಪಾದಕಿಯಾಗಿ, ಶೂದ್ರಶಕ್ತಿ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸರಸ್ವತಿ ಗೌಡ ಅವರಿಗೆ ಮಂಡ್ಯದ ಕೆ.ಎಸ್.ನರಸಿಂಹಸ್ವಾಮಿ ಪ್ರಶಸ್ತಿ, ರಾಜಾರಾಂ ದತ್ತಿನಿಧಿ ಪ್ರಶಸ್ತಿ, ಗೀತಾದೇಸಾಯಿ ದತ್ತಿನಿಧಿ ಬಹುಮಾನ, ಗೊರೂರು ಪ್ರಶಸ್ತಿ, ನಿಸ್ಸೀಮ ಕನ್ನಡತಿ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ, ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳು ಸಂದಿವೆ.
On the birthday of writer M. Saraswathi Gowda 🌷🌷🌷

ಕಾಮೆಂಟ್‌ಗಳು