ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪೂರ್ಣಿಮಾ ನರಸಿಂಹ

ಪೂರ್ಣಿಮಾ ನರಸಿಂಹ

ಕೆಲವರು ಹಾಗೇ... ಮಕ್ಕಳ ಜೊತೆ ಇದ್ದಾಗ ಮಗುವಾಗಿರುತ್ತಾರೆ.  ಕವಿತೆಯೊಂದಿಗಿದ್ದರೆ ತಾವೇ ಕವಿತೆಯಾಗುತ್ತಾರೆ.  ಹೂವಿನೊಂದಿಗಿದ್ದರೆ ಹೂವೇ ಆಗಿಬಿಡುತ್ತಾರೆ.  ಹೀಗೆ ನನಗೆ ಕಂಡವರು 'ಪೂರ್ಣ' ಮನೋಭಾವದ ಪೂರ್ಣಿಮಾ ನರಸಿಂಹ.

ಪೂರ್ಣಿಮಾ ಅವರ ಬರಹಗಳಲ್ಲಿ ಶಾಲೆ, ಮಕ್ಕಳು, ಪರಿಸರ, ಸಮುದಾಯ ಹೀಗೆ ಜೀವಂತಿಕೆ ಇದೆ. ಸಹೃದಯತೆಯ ಸರಳತೆ ಇದೆ. ಒಳಿತನ್ನೇ ಕಾಣುವ ಜೀವನ ಪ್ರೀತಿ ಇದೆ. ಹೀಗಿರುವ ಅವರದೊಂದು ಕವಿತೆಯಂತೆ...

ನಮ್ಮ ಪ್ರೀತಿ ..

ಯಾವ ಕವಿತೆಯಲ್ಲೂ, 
ಕತೆಯಲ್ಲೂ,
 ಪತ್ರದಲ್ಲೂ
ಪ್ರಬಂಧದಲ್ಲೂ,
ಮಾತಿನಲ್ಲೂ
ಕೃತಿಯಲ್ಲೂ
ಹಿಡಿದಿಡುವ 
ಪ್ರೀತಿ ನಮ್ಮದಲ್ಲ.

ಹೋಲಿಕೆಗೆ ನಿಲುಕದ
ಹೇಳಿಕೆಗೂ ಸಿಗದ
ಮೌನ ಮಾಧುರ್ಯವದು
ನಮ್ಮ ಪ್ರೀತಿ.

ನಿನ್ನೆಗಷ್ಟೆ  ಅಲ್ಲ
ಇಂದಿಗೆ ಮುಗಿಯಲ್ಲ
ನಾಳೆ ನಾಳೆಗಳಿಗೂ
ಅದು ಅಕ್ಷಯ..

ಎಂದು ಗುನುಗುತ
ನಾನು
ನೆನೆವೆನು ಅನವರತ.
ನಮ್ಮ ಪ್ರೀತಿಯ ಬಂಧ
ಅದು ಶಾಶ್ವತ.

ಆತ್ಮೀಯ ಸಹೃದಯಿ, ಸಹೋದರಿ ಹುಣ್ಣಿಮೆಯಂತಹ ಶುಭ್ರ ನಗೆಯ ಪೂರ್ಣಿಮಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!