ಸತೀಶ್ ಷಾ
ಸತೀಶ್ ಷಾ
'ಯೇ ಜೋ ಹೈ ಜಿಂದಗಿ' ಎಂಬ ಟಿವಿ ಕಾರ್ಯಕ್ರಮ ನಮ್ಮ ಬದುಕಿನ ಸವಿನೆನಪುಗಳಲ್ಲೊಂದು. 1984ರಲ್ಲಿ ಮೂಡಿಬಂದ ಆ ಕಾರ್ಯಕ್ರಮದ 55 ಕಂತುಗಳಲ್ಲಿ ಪ್ರತಿ ಕಂತಿನಲ್ಲೂ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ, ನಮ್ಮನ್ನು ನಕ್ಕು ನಲಿಯುಂತೆ ಮಾಡಿ ಹಗುರಾಗಿಸಿದವರು ಸತೀಶ್ ಷಾ. ಮುಂದೆ ಅವರು ಅನೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಧಾರಿಯಾಗಿ ನಟಿಸಿದ್ದರು.
ಸತೀಶ್ ಷಾ ಜನಿಸಿದ್ದು 1951ರ ಜೂನ್ 25ರಂದು.
2025ರ ಅಕ್ಟೋಬರ್ 25ರಂದು ಸತೀಶ್ ಷಾ ಹೋಗಿಬಿಟ್ರು ಅಂದಾಗ ನಮ್ಮ ಬದುಕಿನ ಸವಿ ನೆನಪಿನ ಒಂದು ಆಪ್ತತೆ ಕಳಚಿಹೋದಂತಹ ಭಾವ ಮೂಡಿತು.
ಯಾವುದೂ ಶಾಶ್ವತವಲ್ಲ. ನಾವಿರುವವರೆಗೂ ಇಂತಹ ನೆನಪುಗಳಷ್ಟೇ ನಮ್ಮ ಜೀವಾಳ

ಕಾಮೆಂಟ್‌ಗಳು